ಬೇಸಿಗೆ ವಿಶೇಷ; ತೆಂಗಿನಕಾಯಿ ಐಸ್‌ಕ್ರೀಂ ರೆಸಿಪಿ

By Rakshitha Sowmya
Feb 17, 2024

Hindustan Times
Kannada

ಬೇಸಿಗೆಯಲ್ಲಿ ಹೊರಗೆ ಹೋದರೆ ನಮಗೆ ತಿನ್ನಬೇಕು ಎನಿಸುವುದು ಐಸ್‌ಕ್ರೀಮ್‌.  ಮೃದುವಾದ ಕೊಕನೆಟ್‌ ಐಸ್‌ಕ್ರೀಮ್‌ ಮನೆಯಲ್ಲೇ ತಯಾರಿಸಿ, ರೆಸಿಪಿ ಇಲ್ಲಿದೆ. 

ಬೇಕಾಗುವ ಸಾಮಗ್ರಿಗಳು ತೆಂಗಿನ ಗಂಜಿ - 1 1/2 ಕಪ್‌ ಎಳನೀರು - 1/2 ಕಪ್‌ ವಿಪ್‌ ಕ್ರೀಮ್‌ - 3/4 ಕಪ್‌ ತೆಂಗಿನಹಾಲು - 3/4 ಕಪ್‌ ಕಂಡನ್ಸ್‌ಡ್ ಮಿಲ್ಕ್‌ - 3/4 ಕಪ್‌

ಒಂದು ಬೌಲ್‌ನಲ್ಲಿ ತೆಂಗಿನ ಗಂಜಿ, ಎಳನೀರು, ತೆಂಗಿನಹಾಲು ಸೇರಿಸಿ ಮಿಕ್ಸ್‌ ಮಾಡಿ

ಮತ್ತೊಂದು ಬೌಲ್‌ನಲ್ಲಿ ವಿಪ್‌ ಕ್ರೀಮ್‌ ಸೇರಿಸಿ ಬ್ಲೆಂಡ್‌ ಮಾಡಿ ಇದಕ್ಕೆ ತೆಂಗಿನ ಗಂಜಿಯ ಮಿಶ್ರಣ ಹಾಗೂ ಕಂಡನ್ಸಡ್‌ ಮಿಲ್ಕ್‌ ಸೇರಿಸಿ ನಿಧಾನವಾಗಿ ಮಿಕ್ಸ್‌ ಮಾಡಿ

ಐಸ್‌ಕ್ರೀಮ್‌ ಕಂಟೇನರ್‌ಗೆ ಈ ಮಿಶ್ರಣ ಸೇರಿಸಿ 3 ಗಂಟೆಗಳ ಕಾಲ ಫ್ರೀಜರ್‌ನಲ್ಲಿಡಿ

3 ಗಂಟೆಗಳ ನಂತರ ಐಸ್‌ಕ್ರೀಮ್‌ ಮತ್ತೊಮ್ಮೆ 1 ನಿಮಿಷ ಬ್ಲೆಂಡ್‌ ಮಾಡಿ ಮತ್ತೆ 4 ಗಂಟೆಗಳ ಕಾಲ ಫ್ರೀಜರ್‌ನಲ್ಲಿ ಬಿಡಿ

ಚಿಲ್‌ ಐಸ್‌ಕ್ರೀಮನ್ನು ತೆಂಗಿನಕಾಯಿ ಒಳಗಿಟ್ಟು ಸರ್ವ್‌ ಮಾಡಿ

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?