ಹಾಗಲಕಾಯಿ ಅಡುಗೆ ಹೀಗೆ ಮಾಡಿದ್ರೆ ಎಲ್ರಿಗೂ ಇಷ್ಟವಾಗುತ್ತೆ 

By Jayaraj
May 04, 2024

Hindustan Times
Kannada

ಹಾಗಲಕಾಯಿಯ ಕಹಿಯನ್ನು ತೆಗೆದು ಸುಲಭವಾಗಿ ವಿಭಿನ್ನ ಖಾದ್ಯ ಮಾಡಬಹುದು.

ಈ ಡಿಶ್‌ ಹೆಸರು ಸ್ಟಫ್ಡ್ ಬಿಟರ್‌ ಗಾರ್ಡ್. ಇದರ ಅತ್ಯಂತ ಸುಲಭವಾದ ಪಾಕವಿಧಾನ ನೋಡೋಣ.

ಸಾಮಾನ್ಯವಾಗಿ ಕಹಿ ಎಂಬ ಕಾರಣಕ್ಕೆ ಹಾಗಲಕಾಯಿಯನ್ನು ದೂರ ಇಡುವವರೇ ಹೆಚ್ಚು. ಆದರೆ, ಅದರಿಂದ ಈ ಡಿಶ್‌ ತೆಗೆದರೆ ಎಲ್ಲರೂ ತಿನ್ನಬಹುದು.

ಬೇಕಾಗುವ ಸಾಮಗ್ರಿಗಳು: ಹಾಗಲಕಾಯಿ -6, ಬೆಳ್ಳುಳ್ಳಿ ಎಸಳು -5, ಹಸಿಮೆಣಸು -3, ಜೀರಿಗೆ -1 ಚಮಚ, ನೆಲಗಡಲೆ -25 ಗ್ರಾಂ, ಸಾಸಿವೆ -1 ಚಮಚ

ಎಣ್ಣೆ -1 ಚಮಚ, 2 ಈರುಳ್ಳಿ, 1 ಟೊಮೆಟೋ, ಅರಶಿನ ಪುಡಿ -1ಚಮಚ, ಮಾವಿನ ಹುಡಿ -ಸ್ಬಲ್ಪ, ರುಚಿಗೆ ತಕ್ಕಷ್ಟು ಉಪ್ಪು

ಹಾಗಲಕಾಯಿ ಸಿಪ್ಪೆ ಸುಲಿದು, ಅದನ್ನು ಮಧ್ಯದಲ್ಲಿ ಕತ್ತರಿಸಿ ಬೀಜಗಳನ್ನು ತೆಗೆಯಿರಿ.

ಇದಕ್ಕೆ ಉಪ್ಪು ಸವರಿ ಕೆಲಕಾಲ ಹಾಗೆಯೇ ಬಿಡಿ. ಆಗ ಅದರ ಕಹಿ ಹೋಗುತ್ತದೆ.

ಮಿಕ್ಸಿ ಜಾರ್‌ಗೆ ಬೆಳ್ಳುಳ್ಳಿ, ಹಸಿಮೆಣಸು, ಜೀರಿಗೆ, ನೆಲಗಡಲೆ, ಸಾಸಿವೆ ಹಾಗೂ ಮಾವಿನ ಪುಡಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ಸ್ಟಫಿಂಗ್‌ ರೆಡಿ ಮಾಡಲು, ಬಾಣಲೆಗೆ ಎಣೆ ಹಾಕಿ ಅದಕ್ಕೆ ಈರುಳ್ಳಿ ಹಾಗೂ ಟೊಮೆಟೋ ಹಾಕಿ. ಬಳಿಕ ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ಫ್ರೈ ಮಾಡಿ.

ಇದೀಗ ಹಾಗಲಕಾಯಿಗೆ ಸ್ಟಂಫಿಂಗ್‌ ತುಂಬಿ. ಎರಡು ಭಾಗಗಳನ್ನು ಒಟ್ಟುಮಾಡಿ ಕಟ್ಟಿ. ಅದನ್ನು ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಿ. ನಿಮ್ಮ ಡಿಶ್‌ ಸವಿಯಲು ಸಿದ್ಧ

ಕಾಡುಕೋಣ(Indian Bison) ಭಾರತದಲ್ಲಿ ಶೇ.70ರಷ್ಟು ಸಂತತಿ ನಾಶವಾಗಿದೆ.