ಕೋವಿಶೀಲ್ಡ್ ಅಡ್ಡಪರಿಣಾಮಗಳು; ಟಿಟಿಎಸ್ ಲಕ್ಷಣ ಹಾಗೂ ಚಿಕಿತ್ಸೆ ಹೇಗೆ?

By Jayaraj
May 02, 2024

Hindustan Times
Kannada

ಕೋವಿಶೀಲ್ಡ್ ಲಸಿಕೆಯು ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್)ಗೆ ಕಾರಣವಾಗಬಹುದು ಎಂದು ತಿಳಿದುಬಂದಿದೆ.

ಈ ಕುರಿತು ಲಸಿಕೆ ಹೊರತಂದ ಅಸ್ಟ್ರಾಜೆನೆಕಾ ಕಂಪನಿ ಒಪ್ಪಿಕೊಂಡಿದೆ.

ಅಪರೂಪದ ಸಂದರ್ಭಗಳಲ್ಲಿ ಇದು ರಕ್ತ ಹೆಪ್ಪುಗಟ್ಟುವಿಕೆ ಮತ್ತು ರಕ್ತಸ್ರಾವದಂಥ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಟಿಟಿಎಸ್ ಸಂಭವವು ಹೆಚ್ಚಾಗಿ ಯುವಕರಲ್ಲಿ ಮತ್ತು ಮೊದಲ ಡೋಸ್ ಸ್ವೀಕರಿಸುವವರಲ್ಲಿಯೂ ಕಂಡುಬರುತ್ತದೆ ಡಾ.ವಿಶ್ವೇಶ್ವರನ್ ಹೇಳುತ್ತಾರೆ.

ಪಾರ್ಶ್ವವಾಯು, ಹೃದಯದ ತೊಂದರೆಗಳು ಮತ್ತು ರಕ್ತ ಹೆಪ್ಪುಗಟ್ಟುವಿಕೆ ಪ್ರಮುಖ ಲಕ್ಷಣ.

ಕಿಬ್ಬೊಟ್ಟೆಯ ನೋವು, ಕಾಲುಗಳಲ್ಲಿ ಊತ ಮತ್ತು ತೀವ್ರವಾದ ಉಸಿರಾಟ ತೊಂದರೆಗೂ ಕಾರಣವಾಗುತ್ತದೆ ಎಂದು ಹೈದರಾಬಾದ್‌ ವೈದ್ಯರಾದ ಡಾ.ಗೋಪಿ ಕೃಷ್ಣ ಯಡ್ಲಪಾಟಿ ಹೇಳಿದ್ದಾರೆ.

ಟಿಟಿಎಸ್ ರೋಗಿಗಳಿಗೆ ಚಿಕಿತ್ಸೆ ನೀಡುವ ಮುನ್ನ, ಹೃದ್ರೋಗ ತಜ್ಞರು ಥ್ರಂಬೋಸಿಸ್ ಮತ್ತು ರಕ್ತಸ್ರಾವದ ಸಮಸ್ಯೆಗಳ ಅಪಾಯಗಳನ್ನು ಎಚ್ಚರಿಕೆಯಿಂದ ಪರಿಗಣಿಸಬೇಕು ಎಂದು ವೈದ್ಯರು ಹೇಳುತ್ತಾರೆ.

ಪ್ರತಿ ರೋಗಿಯ ನಿರ್ದಿಷ್ಟ ಅಪಾಯದ ಕುರಿತು ಸರಿಯಾದ ವಿಶ್ಲೇಷಣೆ ಮಾಡಿ, ಸೂಕ್ತ ರೀತಿಯ ಮೌಲ್ಯಮಾಪನದ ನಂತರವೇ ಚಿಕಿತ್ಸೆ ಮುಂದುವರೆಸಬೇಕು.

ಐಪಿಎಲ್ 2024ರ ಟಾಪ್ 5 ಅತಿ ಉದ್ದದ ಸಿಕ್ಸರ್