IPL 2025: ಈ ಆಟಗಾರರನ್ನು ರಿಲೀಸ್ ಮಾಡಬಾರದಿತ್ತು ಫ್ರಾಂಚೈಸಿಗಳು

By Jayaraj
Nov 20, 2024

Hindustan Times
Kannada

ಐಪಿಎಲ್ 2025ರ ಆಟಗಾರರ ಹರಾಜು ಪ್ರಕ್ರಿಯೆಗೂ ಮುನ್ನ, ವಿವಿಧ ತಂಡಗಳು ರಿಟೆನ್ಷನ್ ಪ್ರಕ್ರಿಯೆ ಮುಗಿಸಿವೆ.

ಆದರೆ, ಕೆಲವು ತಂಡಗಳು ಪ್ರತಿಭಾವಂತ ಆಟಗಾರರನ್ನು ರಿಲೀಸ್‌ ಮಾಡಿ ತಪ್ಪು ಮಾಡಿವೆ. ಅಂಥಾ ಆಟಗಾರರ ಪಟ್ಟಿ ಇಲ್ಲಿದೆ.

ಯುಜ್ವೇಂದ್ರ ಚಹಾಲ್: ಹಿಂದೆ ಆರ್‌ಸಿಬಿ ಮಾಡಿದ್ದ ತಪ್ಪನ್ನು ಈ ಬಾರಿ ರಾಜಸ್ಥಾನ್‌ ರಾಯಲ್ಸ್‌ ಮಾಡಿದೆ. ಪ್ರಬಲ ಸ್ಪಿನ್ನರ್‌ ಅನ್ನು ಕೈಬಿಟ್ಟಿದೆ.

ಜಾಸ್‌ ಬಟ್ಲರ್: ಹಲವು ಶತಕಗಳನ್ನು ಸಿಡಿಸಿರುವ ಆರಂಭಿಕ ಆಟಗಾರ ಜಾಸ್‌ ಬಟ್ಲರ್‌‌ ಅವರನ್ನು ರಾಜಸ್ಥಾನ ರಾಯಲ್ಸ್ ರಿಲೀಸ್‌ ಮಾಡಬಾರದಿತ್ತು.

ರಿಷಬ್‌ ಪಂತ್:‌ ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಪಂತ್‌ ತಾವಾಗಿಯೇ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇವರನ್ನು ಉಳಿಸಿಕೊಳ್ಳಲು ಡಿಸಿ ಪ್ರಯತ್ನ ಮಾಡಬಹುದಿತ್ತು.

ಅರ್ಷದೀಪ್‌ ಸಿಂಗ್: ಭಾರತದ ಪ್ರಬಲ ವೇಗಿಯಾಗಿರುವ ಅರ್ಷದೀಪ್‌ ಸಿಂಗ್‌ ಅವರನ್ನು ರಿಲೀಸ್‌ ಮಾಡಿದ ಪಂಜಾಬ್‌ ಕಿಂಗ್ಸ್‌, ಹರಾಜಿನಲ್ಲಿ RTM ಕಾರ್ಡ್‌ ಬಳಸಬಹುದು.

ಮೊಹಮ್ಮದ್‌ ಶಮಿ: ಗುಜರಾಟ್‌ ಟೈಟಾನ್ಸ್‌ ತಂಡದ ಅನುಭವಿ ವೇಗಿ ಶಮಿ, ಸದ್ಯ ಗಾಯಾಳು. 2023ರ ಪರ್ಪಲ್ ಕ್ಯಾಪ್ ವಿನ್ನರ್ ರಿಲೀಸ್ ಮಾಡಿದ್ದು ಅಚ್ಚರಿ ಮೂಡಿಸಿದೆ.

ಗ್ಲೆನ್ ಮ್ಯಾಕ್ಸ್‌ವೆಲ್: ಕಳೆದ ಆವೃತ್ತಿಯಲ್ಲಿ ಮ್ಯಾಕ್ಸಿ ಸಂಪೂರ್ಣ ವಿಫಲರಾಗಿದ್ದರು. ಆದರೆ ಯಾವ ಪಂದ್ಯದಲ್ಲಾದರೂ ಇವರು ಅಬ್ಬರಿಸಬಲ್ಲರು. ಇವರನ್ನು ರಿಲೀಸ್‌ ಮಾಡಿ ಆರ್‌ಸಿಬಿ ತಪ್ಪು ಮಾಡಿದೆ.

ಕೆಎಲ್‌ ರಾಹುಲ್: ಕನ್ನಡಿಗ ರಾಹುಲ್ ಎಲ್‌ಎಸ್‌ಜಿ ತಂಡವನ್ನು ನಾಯಕನಾಗಿ ಮುನ್ನಡೆಸಿದವರು. ಆರಂಭಿಕನಾಗಿ ಮಾತ್ರವಲ್ಲದೆ ವಿಕೆಟ್ ಕೀಪರ್ ಆಗಿಯೂ ಕೊಡುಗೆ ನೀಡಬಲ್ಲರು

ಪಿಂಕ್ ಬಾಲ್ ಟೆಸ್ಟ್​ನಲ್ಲಿ ಟ್ರಾವಿಸ್ ಹೆಡ್ ವೇಗದ ಶತಕ