ಇಂಡೋ-ಆಸೀಸ್ ಟೆಸ್ಟ್; MCGಯಲ್ಲಿ ಹೇಗಿದೆ ಭಾರತದ ಸಾಧನೆ?
By Prasanna Kumar P N
Dec 23, 2024
Hindustan Times
Kannada
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತ vs ಆಸ್ಟ್ರೇಲಿಯಾ ನಡುವೆ 4ನೇ ಟೆಸ್ಟ್ ಪಂದ್ಯ ನಡೆಯಲಿದೆ. ಇದು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ.
ಪ್ರಸ್ತುತ ಸರಣಿ 1-1ರಲ್ಲಿ ಸಮಬಲಗೊಂಡಿದೆ. ಪರ್ತ್ನಲ್ಲಿ ಗೆದ್ದಿದ್ದ ಭಾರತ 2ನೇ ಟೆಸ್ಟ್ನಲ್ಲಿ ಸೋಲನುಭವಿಸಿತು. 3ನೇ ಟೆಸ್ಟ್ ಡ್ರಾ ಸಾಧಿಸಿದೆ.
ಸರಣಿಯಲ್ಲಿ ಮುನ್ನಡೆ ಸಾಧಿಸಲು 2ನೇ ಟೆಸ್ಟ್ ಪಂದ್ಯವನ್ನು ಎರಡೂ ತಂಡಗಳು ಗೆಲ್ಲಲೇಬೇಕಾದ ಇಕ್ಕಟ್ಟಿಗೆ ಸಿಲುಕಿವೆ.
ಡಬ್ಲ್ಯುಟಿಸಿ ಫೈನಲ್ ರೇಸ್‌ನಲ್ಲಿ ಜೀವಂತವಾಗಿರಲು 2 ತಂಡಗಳಿಗೆ ವಿಶೇಷವಾಗಿ ಭಾರತಕ್ಕೆ ಸರಣಿ ಗೆಲುವು ಅತ್ಯಗತ್ಯ.
ಎಂಸಿಜಿ ಮೈದಾನದಲ್ಲಿ ಭಾರತ ಕಳಪೆ ದಾಖಲೆಯನ್ನು ಹೊಂದಿದೆ. ಈ ಮೈದಾನದಲ್ಲಿ ರೋಹಿತ್ ಪಡೆ 14 ಪಂದ್ಯಗಳನ್ನು ಆಡಿದೆ.
ಆದರೆ 14 ಪಂದ್ಯಗಳಲ್ಲಿ ಭಾರತ ಗೆದ್ದಿರುವುದು 4 ಪಂದ್ಯಗಳಲ್ಲಿ ಮಾತ್ರ.
ಭಾರತ 8 ಟೆಸ್ಟ್‌ಗಳಲ್ಲಿ ಸೋಲು ಅನುಭವಿಸಿದರೆ 2 ಟೆಸ್ಟ್‌ಗಳು ಡ್ರಾದಲ್ಲಿ ಅಂತ್ಯಗೊಂಡಿವೆ. ಆಸೀಸ್ ಮೇಲುಗೈ ಸಾಧಿಸಿದ್ದು, ಎಚ್ಚರಿಕೆಯ ಆಟವಾಡಬೇಕಿದೆ.
ಸ್ಮೃತಿ ಮಂಧಾನ ವಿಶೇಷ ದಾಖಲೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ