ಸ್ಮೃತಿ ಮಂಧಾನ ವಿಶೇಷ ದಾಖಲೆ
By Jayaraj
Dec 23, 2024
Hindustan Times
Kannada
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸ್ಮೃತಿ ಮಂಧಾನ 91 ರನ್ ಸಿಡಿಸಿದರು.
ಇದರೊಂದಿಗೆ ಭಾರತ ತಂಡದ ಆಟಗಾರ್ತಿ ವಿಶೇಷ ದಾಖಲೆ ಮಾಡಿದ್ದಾರೆ.
ಈ ವರ್ಷ (2024) ಏಕದಿನ ಸ್ವರೂಪದಲ್ಲಿ ಸ್ಮೃತಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ.
ಇದರೊಂದಿಗೆ ಮಹಿಳಾ ಕ್ರಿಕೆಟ್‌ನಲ್ಲಿ ಒಂದೇ ವರ್ಷದಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ.
2024ರಲ್ಲಿ ಸ್ಮೃತಿ ಬರೋಬ್ಬರಿ 1602 ರನ್ ಗಳಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಡ್ 1593 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.
ಮಂಧಾನ ಈ ವರ್ಷ ಈಗಾಗಲೇ ಐದು ಶತಕ ಮತ್ತು 10 ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಸರಣಿಯಲ್ಲಿ ಇನ್ನೂ ಎರಡು ಪಂದ್ಯಗಳು ಉಳಿದಿದ್ದು, ತಮ್ಮ ಮೊತ್ತವನ್ನು ಹೆಚ್ಚಿಸುವ ಅವಕಾಶಗಳಿವೆ.
ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅರ್ಜುನ್ ಜನ್ಯ ಜೋಶ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ