ಭಾರತದ ದಿಗ್ಗಜ ಕ್ರಿಕೆಟಿಗರ ನೆಚ್ಚಿನ ಹವ್ಯಾಸಗಳು
By Jayaraj
Dec 04, 2024
Hindustan Times
Kannada
ಭಾರತದ ಹಲವು ಕ್ರಿಕೆಟಿಗರು, ವೃತ್ತಿಪರ ಕ್ರೀಡೆಯ ಹೊರತಾಗಿ ಹಲವು ಹವ್ಯಾಸಗಳನ್ನು ಬೆಳೆಸಿಕೊಂಡಿದ್ದಾರೆ.
ಮೈದಾನದಲ್ಲಿ ಬ್ಯಾಟಿಂಗ್-ಬೌಲಿಂಗ್‌ನಲ್ಲಿ ಅಬ್ಬರಿಸುವ ಆಟಗಾರರು, ಮೈದಾನದ ಹೊರಗೆ ಒಂದಷ್ಟು ಇಷ್ಟದ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆಗೆ ಫೋಟೋಗ್ರಫಿ ಎಂದರೆ ಆಸಕ್ತಿ. ಅದರಲ್ಲೂ ವನ್ಯಜೀವಿ ಛಾಯಾಗ್ರಹಣ ತುಂಬಾ ಇಷ್ಟ. ಇವರ ಬಳಿ ದುಬಾರಿ ಕ್ಯಾಮೆರಾ ಹಾಗೂ ಗ್ಯಾಜೆಟ್‌ಗಳಿವೆ.
ಮಾಜಿ ನಾಯಕ ಎಂಎಸ್ ಧೋನಿಗೆ ಬೈಕ್ ಎಂದರೆ ತುಂಬಾ ಇಷ್ಟ. ರಾಂಚಿಯ ಫಾರ್ಮ್ ಹೌಸ್‌ನಲ್ಲಿ ಧೋನಿ ಶೋರೂಂಗಿಂತ ದೊಡ್ಡದಾದ ಬೈಕ್ ಗ್ಯಾರೇಜ್ ನಿರ್ಮಿಸಿದ್ದಾರೆ.
ಅಜಿಂಕ್ಯ ರಹಾನೆ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದಾರೆ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ರಹಾನೆ ಪ್ರತಿದಿನ ಕರಾಟೆ ಅಭ್ಯಾಸ ಮಾಡುತ್ತಿದ್ದರು.
ಸ್ಪಿನ್ ಬೌಲರ್ ಯುಜ್ವೇಂದ್ರ ಚಹಾಲ್ ಪರಿಣಿತ ಚೆಸ್ ಆಟಗಾರ.
1983ರಲ್ಲಿ ಟೀಮ್ ಇಂಡಿಯಾವನ್ನು ನಾಯಕನಾಗಿ ವಿಶ್ವಕಪ್ ಗೆದ್ದುಕೊಟ್ಟಿದ್ದ ಕಪಿಲ್ ದೇವ್‌ಗೆ ಗಾಲ್ಫ್ ಆಡುವುದೆಂದರೆ ತುಂಬಾ ಇಷ್ಟ.
ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಸುರೇಶ್ ರೈನಾ ಮತ್ತು ವೇಗದ ಬೌಲರ್ ಇರ್ಫಾನ್ ಪಠಾಣ್ ಅವರಿಗೆ ಹಾಡೋದೆ ಇಷ್ಟದ ಹವ್ಯಾಸ.
ಮುಟ್ಟಿನ ದಿನಗಳಲ್ಲಿ ಎಷ್ಟು ಗಂಟೆಗಳಿಗೊಮ್ಮೆ ಪ್ಯಾಡ್ ಬದಲಿಸಬೇಕು?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ