ಮುಟ್ಟಿನ ದಿನಗಳಲ್ಲಿ ಎಷ್ಟು ಗಂಟೆಗಳಿಗೊಮ್ಮೆ ಪ್ಯಾಡ್ ಬದಲಿಸಬೇಕು?

By Reshma
Dec 04, 2024

Hindustan Times
Kannada

ಮುಟ್ಟಿನ ದಿನಗಳಲ್ಲಿ ಬಳಸುವ ಪ್ಯಾಡ್ ಅನ್ನು ದೀರ್ಘಾವಧಿವರೆಗೆ ಬದಲಿಸದೇ ಇದ್ದರೆ ಗಂಭೀರ ಸಮಸ್ಯೆಗಳು ಎದುರಾಗಬಹುದು

ಈಗ ಮುಟ್ಟಿನ ಕಪ್‌ಗಳು, ಟ್ಯಾಂಪೂನ್‌ಗಳ ಲಭ್ಯತೆಯ ಹೊರತಾಗಿಯೂ ಶೇ80ರಷ್ಟು ಮಹಿಳೆಯರು ದೀರ್ಘಕಾಲದವರೆಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುತ್ತಾರೆ 

ಪ್ಯಾಡ್‌ಗಳನ್ನು ಎಷ್ಟು ಬಾರಿ ಬಳಸಬೇಕು ಎಂಬುದು ಹಲವರಿಗೆ ತಿಳಿದಿಲ್ಲ. ದೀರ್ಘವಧಿವರೆಗೆ ಪ್ಯಾಡ್ ಬದಲಿಸದೇ ಇರುವುದು ಸೂಕ್ಷ್ಮಜೀವಿಗಳನ್ನು ಸೆಳೆಯಲು ಕಾರಣವಾಗಬಹುದು 

ಜನನಾಂಗದ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಪ್ಯಾಡ್‌ನ ದೀರ್ಘಾವಧಿಯ ಬಳಕೆಯ ತುರಿಕೆ, ದದ್ದಿನಂತಹ ಸಮಸ್ಯೆಗಳಾಗಲು ಕಾರಣವಾಗಬಹುದು 

ದೀರ್ಘಕಾಲದ ಪ್ಯಾಡ್ ಬದಲಿಸದೇ ಇರುವುದರಿಂದ ಯೋನಿ ಸ್ಥಳ ದುರ್ವಾಸನೆಯಿಂದ ಕೂಡಿರುತ್ತದೆ 

ಪ್ಯಾಡ್‌ನ ದೀರ್ಘಾವಧಿಯ ಬಳಕೆಯು ತೇವಾಂಶವನ್ನು ಹೆಚ್ಚಿಸುತ್ತದೆ. ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸಂತಾನೋತ್ಪತ್ತಿಯನ್ನು ಹೆಚ್ಚಿಸುತ್ತದೆ 

ಬ್ಲೀಡಿಂಗ್ ಹೆಚ್ಚಿಲ್ಲ ಎಂದರೂ ಪ್ರತಿ ಮೂರರಿಂದ 4 ಗಂಟೆಗೊಮ್ಮೆ ಪ್ಯಾಡ್ ಬದಲಿಸಬೇಕು ಎಂದು ತಜ್ಞರು ಹೇಳುತ್ತಾರೆ 

ಸ್ಯಾನಿಟರಿ ಪ್ಯಾಡ್‌ ಮಾತ್ರವಲ್ಲದೆ ಟ್ಯಾಂಪೂನ್‌ ಮತ್ತು ಮುಟ್ಟಿನ ಕಪ್‌ಗಳನ್ನು ಸಹ ಬದಲಿಸಬೇಕು. ಯೋನಿಯಲ್ಲಿ ಟ್ಯಾಂಪೂನ್ ಅನ್ನು ಹೆಚ್ಚು ಹೊತ್ತು ಇಟ್ಟುಕೊಳ್ಳುವುದು ವಿಷಕಾರಿ ಆಘಾತ ಸಿಂಡ್ರೋಮ್‌ನಂತಹ ಗಂಭೀರ ಸೋಂಕಿಗೆ ಕಾರಣವಾಗಬಹುದು 

ರಷ್ಯಾದ ಯಾಕುಟಿಯಾ ಮೇಲೆ ಅಪ್ಪಳಿಸಿದ ಕ್ಷುದ್ರಗ್ರಹ