ಭಾರತದಲ್ಲಿ ಮದ್ಯದ ವ್ಯವಹಾರಕ್ಕಿಳಿದ ಮಾಜಿ ಕ್ರಿಕೆಟಿಗ

By Jayaraj
Dec 24, 2024

Hindustan Times
Kannada

ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್, ಭಾರತದಲ್ಲಿ ಮದ್ಯದ ವ್ಯವಹಾರ ಆರಂಭಿಸಿದ್ದಾರೆ.

ಪೀಟರ್ಸನ್ ಮಹಾರಾಷ್ಟ್ರದಲ್ಲಿ ಈ ಬ್ಯುಸಿನೆಸ್ ನಡೆಸುತ್ತಿದ್ದಾರೆ. ಮಾಜಿ ಕ್ರಿಕೆಟಿಗ ಪ್ರೀಮಿಯಂ ಬ್ಲೆಂಡೆಡ್ ಸ್ಕಾಚ್ ವಿಸ್ಕಿ ವ್ಯವಹಾರ ನಡೆಸುತ್ತಿದ್ದಾರೆ.

ಪ್ರೀಮಿಯಂ ಸ್ಕಾಚ್ ವಿಸ್ಕಿಗೆ Dram Bell ಎಂದು ಹೆಸರಿಡಲಾಗಿದೆ.

ಪೀಟರ್ಸನ್ ಶೀಘ್ರದಲ್ಲೇ ಉತ್ತರ ಭಾರತದಲ್ಲಿಯೂ ಈ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ಭಾರತದ ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿ ಕಾಣುತ್ತಿದೆ ಎಂದರು.

ನಾವು ಹೊಸ ಸಾಧ್ಯತೆಗಳನ್ನು ಸಹ ನೋಡುತ್ತಿದ್ದೇವೆ. ಹೀಗಾಗಿ ಮದ್ಯದ ಕ್ಷೇತ್ರದಲ್ಲಿ ಭಾರತೀಯ ಗ್ರಾಹಕರಿಗೆ ಉತ್ತಮವಾದದ್ದನ್ನು ನೀಡಲು ಪ್ರಯತ್ನಿಸಿದ್ದೇವೆ ಎಂದಿದ್ದಾರೆ.

ಪೀಟರ್ಸನ್ ಅವರ ಉತ್ಪನ್ನ ಕಂಪನಿಯು, ಮುಂಬರುವ ತಿಂಗಳುಗಳಲ್ಲಿ ಗ್ರಾಹಕರ ಆದ್ಯತೆ ಮತ್ತು ಅಗತ್ಯದ ಆಧಾರದ ಮೇಲೆ ವಿವಿಧ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದೆ.

ಇಂಗ್ಲೆಂಡ್‌ ತಂಡದ ಮಾಜಿ ನಾಯಕ ತಮ್ಮ ಕ್ರಿಕೆಟ್‌ ವೃತ್ತಿಜೀವನದಲ್ಲಿ 104 ಟೆಸ್ಟ್, 136 ಏಕದಿನ ಹಾಗೂ 37 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.

ಚಳಿಗಾಲದಲ್ಲಿ ಹೆಚ್ಚು ಈರುಳ್ಳಿ ತಿನ್ನುವುದರಿಂದಾಗುವ ಪ್ರಯೋಜನಗಳಿವು