ಐಪಿಎಲ್ 2025 ಹರಾಜು ಕೂಗಲಿದ್ದಾರೆ ಮಲ್ಲಿಕಾ ಸಾಗರ್
By Jayaraj
Nov 18, 2024
Hindustan Times
Kannada
ಐಪಿಎಲ್ 18ನೇ ಋತುವಿನ ಮೆಗಾ ಹರಾಜು ನವೆಂಬರ್ 24 ಮತ್ತು 25ರಂದು ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆಯಲಿದೆ.
ಹರಾಜಿಗಾಗಿ 574 ಆಟಗಾರರ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ.
ವರದಿಗಳ ಪ್ರಕಾರ, ಈ ಬಾರಿ ಕೂಡಾ ಹರಾಜುಗಾರ್ತಿ ಮಲ್ಲಿಕಾ ಸಾಗರ್ ಈ ಬಾರಿಯೂ ಆಟಗಾರರನ್ನು ಹರಾಜು ಕೂಗಲಿದ್ದಾರೆ.
ಮಲ್ಲಿಕಾ ಅವರು ಮೊದಲ ಬಾರಿಗೆ ಐಪಿಎಲ್ 17ನೇ ಸೀಸನ್‌ಗೆ ಹರಾಜುಗಾರ್ತಿಯಾಗಿ ಭಾಗವಹಿಸಿದರು.
ಐಪಿಎಲ್ ಇತಿಹಾಸದಲ್ಲಿ ಮಲ್ಲಿಕಾ ಸಾಗರ್ ಮೊದಲ ಮಹಿಳಾ ಹರಾಜುದಾರರಾಗಿದ್ದಾರೆ. ಈ ಹಿಂದಿನ ಹರಾಜಿನಲ್ಲಿ ಪುರುಷರೇ ಕಾಣಸಿಗುತ್ತಿದ್ದರು.
ಐಪಿಎಲ್ ಮಾತ್ರವಲ್ಲದೆ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲೂ ಮಲ್ಲಿಕಾ ಹರಾಜುಗಾರ್ತಿಯಾಗಿ ಭಾಗವಹಿಸಿದ್ದಾರೆ.
ಮಲ್ಲಿಕಾ ಅವರು ಸುಮಾರು 25 ವರ್ಷಗಳಿಂದ ವಿವಿಧ ಕ್ರೀಡೆಗಳು ಮತ್ತು ಲೀಗ್‌ಗಳಿಗೆ ಹರಾಜುದಾರರಾಗಿ ಕೆಲಸ ಮಾಡುತ್ತಿದ್ದಾರೆ.
ಹರಾಜಿಗೂ ಮುನ್ನ ಆಟಗಾರರ ಬಗ್ಗೆ ಸಾಧ್ಯವಾದಷ್ಟು ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಮಲ್ಲಿಕಾ ಹೇಳಿದ್ದಾರೆ.
ಮಲ್ಲಿಕಾ ಹುಟ್ಟಿದ್ದು ಮುಂಬೈನಲ್ಲಿ. ಕುಟುಂಬದವರು ಬ್ಯುಸಿನೆಸ್ ಹಿನ್ನೆಲೆ ಹೊಂದಿದ್ದರಿಂದ, ಮಲ್ಲಿಕಾ ಕೂಡಾ ವಿದೇಶದಲ್ಲಿ ಓದಿದ್ದಾರೆ.
ಪುಷ್ಪ 2 ಡಿಸೆಂಬರ್ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ
Instagram/rashmika_mandanna
ಮುಂದಿನ ಸ್ಟೋರಿ ಕ್ಲಿಕ್ ಮಾಡಿ