ಐಪಿಎಲ್ ಹರಾಜಿನಲ್ಲಿ ದುಬಾರಿ ಬೆಲೆಗೆ ಸೇಲ್ ಆದ ಆಟಗಾರರು 

By Jayaraj
Nov 23, 2024

Hindustan Times
Kannada

ಐಪಿಎಲ್ 2025ರ ಮೆಗಾ ಹರಾಜು ನವೆಂಬರ್ 24 ಮತ್ತು 25ರಂದು ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆಯುತ್ತಿದೆ.

ಹರಾಜಿನಲ್ಲಿ 577 ಆಟಗಾರರ ಭವಿಷ್ಯ ನಿರ್ಧಾರವಾಗಲಿದೆ. 10 ತಂಡಗಳು ಕೇವಲ 204 ಸ್ಲಾಟ್‌ಗಳನ್ನು ತುಂಬಲಿವೆ.

ಐಪಿಎಲ್‌ನ ಕಳೆದ 5 ಸೀಸನ್‌ಗಳಲ್ಲಿ ಟೂರ್ನಿಯ ಅತ್ಯಂತ ದುಬಾರಿ ಆಟಗಾರ ಯಾರು ಎಂಬುದನ್ನು ತಿಳಿಯೋಣ.

ಐಪಿಎಲ್ 2024ರಲ್ಲಿ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಅತ್ಯಂತ ದುಬಾರಿ ಆಟಗಾರ. ಕೆಕೆಆರ್ ತಂಡ ಇವರನ್ನು 24.75 ಕೋಟಿ ರೂ.ಗೆ ಖರೀದಿಸಿತ್ತು.

ಇಂಗ್ಲೆಂಡ್‌ನ ಯುವ ಆಲ್‌ರೌಂಡರ್ ಸ್ಯಾಮ್ ಕರನ್, 2023ರ ಐಪಿಎಲ್ ಋತುವಿನಲ್ಲಿ ದುಬಾರಿ ಆಟಗಾರ. ಪಂಜಾಬ್ ಕಿಂಗ್ಸ್ 18.50 ಕೋಟಿಗೆ ಖರೀದಿಸಿತ್ತು.

2022ರಲ್ಲಿ ಭಾರತೀಯ ವಿಕೆಟ್ ‌ಕೀಪರ್ ಇಶಾನ್ ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ 15.25ರೂ ಕ್ಕೆ ಖರೀದಿಸಿತ್ತು.

2021ರಲ್ಲಿ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕ್ರಿಸ್ ಮೋರಿಸ್ ಅವರನ್ನು ರಾಜಸ್ಥಾನ್ ರಾಯಲ್ಸ್ 16.25 ಕೋಟಿ ರೂ.ಗೆ ಖರೀದಿಸಿತ್ತು.

ಆಸ್ಟ್ರೇಲಿಯಾದ ಬೌಲರ್ ಪ್ಯಾಟ್ ಕಮಿನ್ಸ್ 2020ರ ಅತ್ಯಂತ ದುಬಾರಿ ಆಟಗಾರ. ಕಮಿನ್ಸ್ ಅವರನ್ನು ಕೋಲ್ಕತ್ತಾ 15.5 ಕೋಟಿಗೆ ಖರೀದಿಸಿತ್ತು.

ಪುಷ್ಪ 2 ಡಿಸೆಂಬರ್‌ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ

Instagram/rashmika_mandanna