ಕ್ರಿಕೆಟ್​ನಲ್ಲಿ ನಿವೃತ್ತಿ ಪಡೆದ ಜೆರ್ಸಿ ಸಂಖ್ಯೆಗಳು ಯಾವುವು?

By Prasanna Kumar P N
Sep 11, 2024

Hindustan Times
Kannada

ಮಾರಣಾಂತಿಕ ಬೌನ್ಸರ್​ನಿಂದ 2014ರಲ್ಲಿ ನಿಧನರಾದ ಫಿಲಿಫ್ ಹ್ಯೂಸ್ ಅವರ ಜೆರ್ಸಿ 64 ಅನ್ನು ಆಸ್ಟ್ರೇಲಿಯಾ ನಿವೃತ್ತಿಗೊಳಿಸಿದೆ.

ಸ್ಟೀಫನ್ ಫ್ಲೆಮಿಂಗ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಜೆರ್ಸಿ ಸಂಖ್ಯೆ 7 ಅನ್ನು ನ್ಯೂಜಿಲೆಂಡ್ ನಿವೃತ್ತಗೊಳಿಸಿತು.

ನ್ಯೂಜಿಲೆಂಡ್ ಸ್ಫೋಟಕ ಬ್ಯಾಟರ್​ ಬ್ರೆಂಡನ್ ಮೆಕಲಮ್ ಜೆರ್ಸಿ ಸಂಖ್ಯೆ 42 ರನ್ನು ರಿಟೈರ್ ಮಾಡಲಾಗಿದೆ.

ನೇಪಾಳದ ಮಾಜಿ ನಾಯಕ ಪರಾಸ್ ಖಡ್ಕಾ ಜೆರ್ಸಿ 77ಕ್ಕೆ ನಿವೃತ್ತಿ ನೀಡಲಾಗಿದೆ.

ದಿಗ್ಗಜ ಆಲ್​ರೌಂಡರ್ ಕ್ರಿಸ್​ ಕೇರ್ನ್ಸ್​​ಗೆ ಗೌರವ ಸಲ್ಲಿಸುವ ಸಲುವಾಗಿ ನ್ಯೂಜಿಲೆಂಡ್ ಜೆರ್ಸಿ ಸಂಖ್ಯೆ 6 ಅನ್ನು ನಿವೃತ್ತಗೊಳಿಸಿದೆ.

ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ವೇಗದ ದ್ವಿಶತಕ ದಾಖಲೆ ಬರೆದಿರುವ ನಾಥನ್ ಆಸ್ಟಲ್​ರ ಜೆರ್ಸಿ ಸಂಖ್ಯೆ 9 ಅನ್ನು ಕಿವೀಸ್ ನಿವೃತ್ತಗೊಳಿಸಿದೆ.

ಮೂರು ಐಸಿಸಿ ಟ್ರೋಫಿ ಗೆದ್ದ ನಾಯಕ ಎಂಎಸ್ ಧೋನಿ ಜೆರ್ಸಿ ಸಂಖ್ಯೆ 7 ಅನ್ನು ಬಿಸಿಸಿಐ ರಿಟೈರ್ ಮಾಡಿದೆ.

ನ್ಯೂಜಿಲೆಂಡ್ ಐಕಾನ್ ಡೇನಿಯಲ್ ವೆಟ್ಟೋರಿ ಅವರ 11ನೇ ಸಂಖ್ಯೆಯ ಜೆರ್ಸಿಯನ್ನು ನಿವೃತ್ತಗೊಳಿಸಿತು.

ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್​​​ಗೆ ಗೌರವ ಸಲ್ಲಿಸಲು ಜೆರ್ಸಿ ಸಂಖ್ಯೆ 10 ಅನ್ನು ಬಿಸಿಸಿಐ ನಿವೃತ್ತಗೊಳಿಸಿದೆ.

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ