ಅಭಿಷೇಕ್ ಶರ್ಮಾ ಶತಕ ಸಿಡಿಸಿದ್ದು ಈತನ ಬ್ಯಾಟ್‌ನಿಂದ
By Jayaraj
Jul 08, 2024
Hindustan Times
Kannada
ಜಿಂಬಾಬ್ವೆ ವಿರುದ್ಧ ಸ್ಫೋಟಕ ಶತಕ ಸಿಡಿಸಿದ ಅಭಿಷೇಕ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಕೇವಲ 47 ಎಸೆತಗಳಲ್ಲಿ ಅವರು 8 ಸಿಕ್ಸರ್ ಸಹಿತ, ತಾನಾಡಿದ ಎರಡನೇ ಪಂದ್ಯದಲ್ಲೇ ಚೊಚ್ಚಲ ಅಂತಾರಾಷ್ಟ್ರೀಯ ಶತಕ ಸಿಡಿಸಿದರು.
ವಿಶೇಷವೆಂದರೆ, ಪಂದ್ಯದಲ್ಲಿ ಅಭಿಷೇಕ್ ಅವರು ತಮ್ಮ ಬಾಲ್ಯದ ಗೆಳೆಯನ ಬ್ಯಾಟ್ ಬಳಸಿದ್ದರು. ಅದೇ ಬ್ಯಾಟ್‌ನಲ್ಲಿ ಆಡಿ ಸೆಂಚುರಿ ಸಾಧನೆ ಮಾಡಿದ್ದಾರೆ.
ಆ ಗೆಳೆಯ ಬೇರೆ ಯಾರೂ ಅಲ್ಲ. ಭಾರತ ತಂಡದ ನಾಯಕ ಶುಭ್ಮನ್ ಗಿಲ್.
ಅಭಿಷೇಕ್ ಹಾಗೂ ಗಿಲ್ ಅಂಡರ್-12 ವರ್ಷದೊಳಗಿನ ಕ್ರಿಕೆಟ್‌ನಿಂದಲೇ ಗೆಳೆಯರು.
ಪಂದ್ಯದ ಬಳಿಕ ಮಾತನಾಡಿದ ಅಭಿಷೇಕ್, ಗಿಲ್ ಅವರ ಬ್ಯಾಟ್‌ನಲ್ಲಿ ಆಡಿದ್ದಾಗಿ ಹೇಳಿಕೊಂಡಿದ್ದಾರೆ.
ಇಂದು, ನಾನು ಗಿಲ್ ಬ್ಯಾಟ್‌ನಲ್ಲಿ ಆಡಿದೆ. ಅವರ ಬ್ಯಾಟ್‌ಗೆ ವಿಶೇಷ ಧನ್ಯವಾದಗಳು ಎಂದು ಹೇಳಿದರು.
ನಾವಿಬ್ಬರೂ ಅಂಡರ್-12ನಿಂದ ಒಟ್ಟಿಗೆ ಆಡುತ್ತಿದ್ದೇವೆ. ಭಾರತ ತಂಡಕ್ಕೆ ಆಯ್ಕೆಯಾದಾಗ, ಮೊದಲ ಕರೆ ಬಂದಿದ್ದು ಶುಭ್ಮನ್ ಅವರಿಂದ ಎಂದು ಅಭಿಷೇಕ್ ಹೇಳಿಕೊಂಡರು.
ಎರಡನೇ ಟಿ20 ಪಂದ್ಯದಲ್ಲಿ ಭಾರತ 100 ರನ್‌ಗಳ ಅಂತರದಿಂದ ಸುಲಭ ಜಯ ಸಾಧಿಸಿತು.
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ