ದಾಖಲೆಗಳು ಇರುವುದೇ ಮುರಿಯಲು. ಆದರೆ ಕ್ರಿಕೆಟ್ನಲ್ಲಿ ಈವರೆಗೂ ಮುರಿಯಲಾಗದ ರೆಕಾರ್ಡ್ಗಳಿವೆ. ಮುರಿಯುವುದಿರಲಿ, ಅವುಗಳ ಹತ್ತಿರ ಸುಳಿಯಲೂ ಸಾಧ್ಯವಿಲ್ಲ. ಇಲ್ಲಿದೆ ನೋಡಿ.
ಕ್ರಿಕೆಟಿಗರು 40 ವರ್ಷಕ್ಕಿಂತ ಮೊದಲೇ ನಿವೃತ್ತರಾಗುತ್ತಾರೆ. ಅಪರೂಪ ಅಂದರೆ 45 ವರ್ಷದೊಳಗೆ ನಿವೃತ್ತಿಯಾಗಿದ್ದೂ ಇದೆ. ಆದರೆ, ಇಲ್ಲೊಬ್ಬ ಆಟಗಾರ 52ನೇ ವಯಸ್ಸಿನಲ್ಲಿ ನಿವೃತ್ತಿಯಾಗಿದ್ದಾರೆ.
ಇಂಗ್ಲೆಂಡ್ ಕ್ರಿಕೆಟಿಗ ವಿಲ್ಫ್ರೆಡ್ ರೋಡ್ಸ್ ಟೆಸ್ಟ್ ಆಡಿದ ಅತ್ಯಂತ ಹಿರಿಯ ಆಟಗಾರ. ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು 1930ರ ಏಪ್ರಿಲ್ 3ರಂದು ಆಡಿದ್ದರು. ಆಗ ಅವರಿಗೆ 52 ವರ್ಷ. ಈ ದಾಖಲೆ ಮುರಿಯುವುದು ಸುಲಭವಲ್ಲ.
ಇಂಗ್ಲೆಂಡ್ ಆಫ್ ಸ್ಪಿನ್ನರ್ ಜಿಮ್ ಲೇಕರ್ ಟೆಸ್ಟ್‌ನಲ್ಲಿ 19 ವಿಕೆಟ್ ಪಡೆದಿದ್ದರು. ಈವರೆಗೆ ಈ ದಾಖಲೆ ಮುರಿಯಲು ಯಾರಿಂದಲೂ ಸಾಧ್ಯವಾಗಿಲ್ಲ. 1956ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಈ ಸಾಧನೆ ಮಾಡಿದ್ದರು.
ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಸರ್ ಡಾನ್ ಬ್ರಾಡ್‌ಮನ್ ಟೆಸ್ಟ್‌ನಲ್ಲಿ 99.94 ಸರಾಸರಿ ಹೊಂದಿದ್ದಾರೆ. ಈವರೆಗೆ ವಿಶ್ವದ ಯಾವುದೇ ಬ್ಯಾಟರ್ ಈ ಸರಾಸರಿಯ ಸಮೀಪಕ್ಕೂ ಬಂದಿಲ್ಲ.
ಇಂಗ್ಲೆಂಡ್‌ನ ಸರ್ ಜಾಕ್ ಹಾಬ್ಸ್ ಅತಿ ಹೆಚ್ಚು ಪ್ರಥಮ ದರ್ಜೆ ಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಅವರು ತಮ್ಮ ಹೆಸರಿನಲ್ಲಿ 199 ಶತಕಗಳನ್ನು ಗಳಿಸಿದ್ದಾರೆ. ಯಾರೂ ಅದರ ಹತ್ತಿರಕ್ಕೆ ಬಂದಿಲ್ಲ.
ಇಂಗ್ಲೆಂಡ್‌ನ ಟ್ರೆವರ್ ಟೆಸ್ಟ್‌ನಲ್ಲಿ ನಿಧಾನಗತಿಯ ಅರ್ಧಶತಕ ಗಳಿಸಿದ ದಾಖಲೆ ಹೊಂದಿದ್ದಾರೆ. 350 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ. 1958-59ರಲ್ಲಿ ಆಸ್ಟ್ರೇಲಿಯಾ ಎದುರು ಈ ಸಾಧನೆ ಮಾಡಿದ್ದರು.
ಭಾರತದ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಶತಕ ಬಾರಿಸಿದ ವಿಶ್ವದ ಏಕೈಕ ಆಟಗಾರ. ಅವರ ಈ ದಾಖಲೆ ಮುರಿಯುವುದು ಅಸಾಧ್ಯ ಎನಿಸುತ್ತಿದೆ.
ಒಂದೇ ಓವರ್‌ನಲ್ಲಿ ಅತಿ ಹೆಚ್ಚು ಎಸೆತಗಳನ್ನು ಎಸೆದ ಕೆಟ್ಟ ದಾಖಲೆ ಪಾಕಿಸ್ತಾನದ ಮೊಹಮ್ಮದ್ ಸಮಿ ಹೆಸರಿನಲ್ಲಿದೆ. ಬಾಂಗ್ಲಾದೇಶ ವಿರುದ್ಧದ ಏಕದಿನದಲ್ಲಿ 17 ಎಸೆತಗಳ ಓವರ್ ಬೌಲ್ ಮಾಡಿದ್ದರು.
ಮೊಹಮ್ಮದ್ ಸಮಿ ಈ ಒಂದು ಓವರ್‌ನಲ್ಲಿ 7 ವೈಡ್ ಮತ್ತು 4 ನೋ ಬಾಲ್‌ಗಳನ್ನು ಎಸೆದಿದ್ದರು.