ಡೆಲ್ಲಿ ಕ್ಯಾಪಿಟಲ್ಸ್‌ vs ಎಲ್‌ಎಸ್‌ಜಿ ಮುಖಾಮುಖಿ ದಾಖಲೆ

By Jayaraj
May 13, 2024

Hindustan Times
Kannada

ಐಪಿಎಲ್‌ 2024ರ 64ನೇ ಪಂದ್ಯದಲ್ಲಿ ಡಿಸಿ ಹಾಗೂ ಎಲ್‌ಎಸ್‌ಜಿ ತಂಡಗಳು ಮುಖಾಮುಖಿಯಾಗುತ್ತಿವೆ.

ಪ್ಲೇ ಆಫ್‌ ಪ್ರವೇಶಕ್ಕೆ ಉಭಯ ತಂಡಗಳಿಗೆ ಗೆಲುವು ಅನಿವಾರ್ಯವಾಗಿದೆ.

ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ.

ಉಭಯ ತಂಡಗಳ ಮುಖಾಮುಖಿ ದಾಖಲೆ ನೋಡೋಣ.

ಡೆಲ್ಲಿ ಹಾಗೂ ಲಕ್ನೋ ತಂಡಗಳು ಐಪಿಎಲ್‌ನಲ್ಲಿ ಈವರೆಗೆ 4 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ.

ಇದರಲ್ಲಿ ಲಕ್ನೋ ತಂಡವು 3 ಪಂದ್ಯಗಳಲ್ಲಿ ಗೆದ್ದು ಮೇಲುಗೈ ಸಾಧಿಸಿದೆ.

ಅತ್ತ ಡೆಲ್ಲಿ ತಂಡವು ಇದೇ ಆವೃತ್ತಿಯಲ್ಲಿ ನಡೆದ ಮೊದಲ ಮುಖಾಮುಖಿಯಲ್ಲಿ ಲಕ್ನೋವನ್ನು ಮಣಿಸಿತ್ತು.

ಆ ಒಂದು ಗೆಲುವಿನ ಹೊರತಾಗಿಯೂ, ಡೆಲ್ಲಿಯು ಲಕ್ನೋ ವಿರುದ್ಧ 1-3ರ ಹಿನ್ನೆಡೆ ಅನುಭವಿಸಿದೆ.

ದೆಹಲಿಯಲ್ಲಿ ಲಕ್ನೋ ತಂಡವು ಮೊದಲ ಪಂದ್ಯವನ್ನಾಡುತ್ತಿದೆ.

ಮಳೆಗಾಲದಲ್ಲಿ ನಮ್ಮ ಬಳಿ ಇರಲೇಬೇಕಾದ 10 ಅಗತ್ಯ ವಸ್ತುಗಳಿವು