ಕನ್ನಡಿಗ ದೇವದತ್‌ ಪಡಿಕ್ಕಲ್‌ ಪದಾರ್ಪಣೆ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ್ದಾರೆ.

By Jayaraj
Mar 08, 2024

Hindustan Times
Kannada

ಇಂಗ್ಲೆಂಡ್‌ ವಿರುದ್ಧದ 5ನೇ ಟೆಸ್ಟ್‌ನಲ್ಲಿ, ಪಡಿಕ್ಕಲ್‌ ಆಕರ್ಷಕ ಅರ್ಧಶತಕ ಸಿಡಿಸಿದರು.

ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ಡಿಡಿಪಿ, ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಲ್ಲೇ ಫಿಫ್ಟಿ ಬಾರಿಸಿದ್ದಾರೆ.

ಒಟ್ಟು 103 ಎಸೆತ ಎದುರಿಸಿದ ಪಡಿಕ್ಕಲ್‌ 65 ರನ್‌ ಗಳಿಸಿ ಔಟಾದರು.

ತಮ್ಮ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಹಾಗೂ 1 ಸಿಕ್ಸರ್‌ ಸಿಡಿಸಿದರು.

ಪಂದ್ಯದಲ್ಲಿ ಸರ್ಫರಾಜ್‌ ಖಾನ್‌ ಜೊತೆಗೆ ಅಮೂಲ್ಯ 97 ರನ್‌ ಜೊತೆಯಾಟವಾಡಿದರು.

ನಾಲ್ಕನೇ ಕ್ರಮಾಂಕದಲ್ಲಿ ಪದಾರ್ಪಣೆ ಪಂದ್ಯವಾಡಿ ಅತಿ ಹೆಚ್ಚು ರನ್‌ ಗಳಿಸಿದ ಎರಡನೇ ಭಾರತೀಯ ಆಟಗಾರ ಪಡಿಕ್ಕಲ್‌

ಇದೇ ವೇಳೆ, ಇಂಗ್ಲೆಂಡ್‌ ವಿರುದ್ಧದ ಪ್ರಸಕ್ತ ಸರಣಿಯಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ನಾಲ್ಕನೇ ಬ್ಯಾಟರ್‌ ಡಿಡಿಪಿ

ಪ್ರಸಕ್ತ ಸರಣಿಯಲ್ಲಿ ಪದಾರ್ಪಣೆ ಮಾಡಿದ ಐದನೇ ಭಾರತೀಯ ಪಡಿಕ್ಕಲ್. ಅಲ್ಲದೆ ಭಾರತದ 314ನೇ ಟೆಸ್ಟ್ ಕ್ರಿಕೆಟಿಗ.

ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್ ಮುಖಾಮುಖಿ ದಾಖಲೆ