ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಸ್ಮೃತಿ, ಹರ್ಮನ್​

By Prasanna Kumar P N
Jul 18, 2024

Hindustan Times
Kannada

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಸಮಾರಂಭದಲ್ಲಿ ಸ್ಮೃತಿ ಮಂಧಾನ, ಹರ್ಮನ್​ಪ್ರೀತ್ ಕೌರ್ ಸೇರಿ ಭಾರತೀಯ ಮಹಿಳಾ ಕ್ರಿಕೆಟರ್​​ಗಳು ಕೂಡ ಪಾಲ್ಗೊಂಡಿದ್ದರು.

ಅದ್ಧೂರಿ ಸಮಾರಂಭದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಸೊಬಗುಗಳ ಸಾರವನ್ನು ಸೆರೆ ಹಿಡಿಯುವ ಸಾಂಪ್ರದಾಯಿಕ ಉಡುಗೆಗಳಲ್ಲಿ ಮಿಂಚಿದರು. ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ.

ಭಾರತೀಯ ಮಹಿಳಾ ಕ್ರಿಕೆಟ್​ ತಂಡದ ನಾಯಕಿ ಹರ್ಮನ್​ಪ್ರೀತ್, ತಮ್ಮ ಕ್ರಿಯಾತ್ಮಕ ವ್ಯಕ್ತಿತ್ವಕ್ಕೆ ಸಂಪೂರ್ಣವಾಗಿ ಪೂರಕವಾದ ಅದ್ಭುತವಾದ ಉಡುಪಿನಲ್ಲಿ ತಲೆ ತಿರುಗುವಂತೆ ಮಾಡಿದ್ದಾರೆ.

ಭಾರತದ ಪ್ರಸಿದ್ಧ ಬ್ಯಾಟರ್​​​​ಗಳಲ್ಲಿ ಒಬ್ಬರಾದ ಸ್ಮೃತಿ ಮಂಧಾನ ಕೂಡ ತುಂಬಾ ಆಕರ್ಷಕರಾಗಿದ್ದರು. ಅತ್ಯಾಧುನಿಕ ಸೀರೆಯಲ್ಲಿ ಸೂಪರ್​​ ಡೂಪರ್​ ಆಗಿ ಕಾಣುತ್ತಿದ್ದರು.

ಜುಲೈ 19 ರಿಂದ ಪ್ರಾರಂಭವಾಗುವ ಟಿ20ಐ ಕ್ರಿಕೆಟ್ ಮಾದರಿಯ ಏಷ್ಯಾಕಪ್​ ಟೂರ್ನಿಯಲ್ಲಿ ಇಬ್ಬರೂ ಪಾಲ್ಗೊಳ್ಳಲಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಸೌತ್ ಆಫ್ರಿಕಾ ವಿರುದ್ದದ ಸರಣಿಯಲ್ಲಿ ಬ್ಯಾಟಿಂಗ್​ನಲ್ಲಿ ಸ್ಮೃತಿ ಮಂಧಾನ ಹಾಗೂ ನಾಯಕಿಯಾಗಿ ಹರ್ಮನ್​ಪ್ರೀತ್ ಕೌರ್ ಮಿಂಚಿದರು.

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ