ಭಾರತದ ವಿರುದ್ಧ ಗೆದ್ದೇ ಇಲ್ಲ ಐರ್ಲೆಂಡ್!

By Prasanna Kumar P N
Jun 04, 2024

Hindustan Times
Kannada

ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಟೀಮ್ ಇಂಡಿಯಾ ತನ್ನ ಅಭಿಯಾನ ಆರಂಭಿಸಲು ಸಜ್ಜಾಗಿದೆ. ಐರ್ಲೆಂಡ್ ವಿರುದ್ಧ ಸೆಣಸಾಟ ನಡೆಸಲಿದೆ.

ಜೂನ್ 5ರ ಬುಧವಾರ ಯಾರ್ಕ್​ನ ನಸ್ಸೌ ಅಂತಾರಾಷ್ಟ್ರೀಯ ಕ್ರಿಕೆಟ್​ ಮೈದಾನವು ವೇದಿಕೆ ಕಲ್ಪಿಸಲಿದೆ. ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​​ನಲ್ಲಿ ಉಭಯ ತಂಡಗಳ ಮುಖಾಮುಖಿ ಹೇಗಿದೆ? ಇಲ್ಲಿದೆ ವಿವರ ನೋಡಿ.

ಟಿ20ಐ​​ನಲ್ಲಿ ಉಭಯ ತಂಡಗಳು ತಲಾ 7 ಬಾರಿ ಮುಖಾಮುಖಿಯಾಗಿವೆ. ಆದರೆ ಎಲ್ಲಾ ಪಂದ್ಯಗಳನ್ನೂ ಭಾರತವೇ ಗೆದ್ದಿದೆ.

ಹಾಗಾಗಿ ಐರ್ಲೆಂಡ್, ಟೀಮ್ ಇಂಡಿಯಾ ವಿರುದ್ಧ ಖಾತೆ ತೆರೆಯುವ ಇರಾದೆಯಲ್ಲಿದೆ. ಮತ್ತೊಂದೆಡೆ ರೋಹಿತ್​ ಪಡೆ, ಗೆಲುವಿನ ಸಂಖ್ಯೆ 8ಕ್ಕೆ ಏರಿಸುವ ಲೆಕ್ಕಾಚಾರದಲ್ಲಿದೆ.

2009ರ ಬಳಿಕ ಮೊದಲ ಬಾರಿಗೆ ಅಂದರೆ, ಒಟ್ಟಾರೆ ಎರಡನೇ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಐರ್ಲೆಂಡ್‌ ತಂಡವನ್ನು ಭಾರತ ಎದುರಿಸುತ್ತಿದೆ.

ಭಾರತ ಮತ್ತು ಐರ್ಲೆಂಡ್ ಟಿ20 ಸರಣಿಗಳಲ್ಲಿ ಅತ್ಯಧಿಕ ರನ್ ಗಳಿಸಿದವರು ಆಂಡ್ರ್ಯೂ ಬಾಲ್ಬಿರ್ನಿ (156), ಅತ್ಯಧಿಕ ವಿಕೆಟ್ ಪಡೆದವರು ಕುಲ್ದೀಪ್ ಯಾದವ್ (7).

ನೀವು ವೀಕ್ಷಿಸಲೇಬೇಕಾದ ಭಾರತದ 8 ಸೈಂಟಿಫಿಕ್ ಫಿಕ್ಷನ್‌ ಚಿತ್ರಗಳು