ಸಖತ್‌ ಸುಂದ್ರಿ ಗುರು, ಆರ್‌ಸಿಬಿ ಆಲ್‌ರೌಂಡರ್ ವಿಲ್‌ ಜಾಕ್ಸ್‌ ಗರ್ಲ್‌ ಫ್ರೆಂಡ್‌

By Reshma
Apr 30, 2024

Hindustan Times
Kannada

ಸದ್ಯ ಎಲ್ಲೆಲ್ಲೂ ಐಪಿಎಲ್‌ ಹವಾ. ಭಾನುವಾರ ಗುಜರಾತ್‌ ಟೈಟಾನ್ಸ್‌ ವಿರುದ್ಧ ನಡೆದ ಮ್ಯಾಚ್‌ನಲ್ಲಿ ಆರ್‌ಸಿಬಿ ಬ್ಯಾಟರ್ ವಿಲ್‌ ಜಾಕ್ಸ್‌ 41 ಎಸೆತಗಳಲ್ಲಿ 100 ರನ್‌ ಗಳಿಸಿದ್ದರು. 

5 ಬೌಂಡರಿ ಹಾಗೂ 10 ಸಿಕ್ಸರ್‌ ಸಿಡಿಸಿ ಅಬ್ಬರಿಸಿದ್ದರು. ಸದ್ಯ ಎಲ್ಲರೂ ಆಂಗ್ಲ ಕ್ರಿಕೆಟಿಗನ ಬಗ್ಗೆಯೇ ಮಾತನಾಡುತ್ತಿದ್ದಾರೆ. 

ಇದರೊಂದಿಗೆ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಜನರು ಬಯಸುತ್ತಿದ್ದಾರೆ. ಈ ಸಂದರ್ಭ ಜಾಕ್ಸ್ ಅವರ ಗರ್ಲ್‌ಫ್ರೆಂಡ್‌ ಬಗ್ಗೆ ನಾವು ನಿಮಗೆ ಮಾಹಿತಿ ನೀಡುತ್ತೇವೆ. 

ವಿಲ್‌ ಜಾಕ್ಸ್‌ ಅವರ ಗೆಳತಿಯ ಹೆಸರು ಅನಾ ಬ್ರಮ್‌ವೆಲ್‌. ಐಪಿಎಲ್‌ ಮ್ಯಾಚ್‌ ನೋಡಲು ಅವರು ಭಾರತಕ್ಕೂ ಬಂದಿದ್ದಾರೆ. 

ಈ ಇಂಗ್ಲೆಂಡ್‌ ಕ್ರಿಕೆಟಿಗ ಆಗಾಗ ತನ್ನ ಗೆಳತಿಯೊಂದಿಗಿನ ಫೋಟೊಗಳನ್ನು ಸಾಮಾಜಿಕ ಜಾಲತಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. 

ತಮ್ಮ ಅದ್ಭುತ ಸೌಂದರ್ಯ ಹಾಗೂ ಗ್ಲಾಮರ್‌ ಮೂಲಕ ಅನಾ ಬ್ರುಮ್‌ವೆಲ್‌ ಹಾಲಿವುಡ್‌ ನಟಿಯರಿಗೆ ಪೈಪೋಟಿ ನೀಡುವಂತಿದ್ದಾರೆ. 

ವಿಲ್‌ ಹಾಗೂ ಅನಾ ಹಲವು ದಿನಗಳಿಂದ ಡೇಟಿಂಗ್‌ ಮಾಡುತ್ತಿದ್ದಾರೆ. 

ಅಪ್ಸರೆಯಂತೆ ಕಾಣುವ ಅನಾ ಫಿಟ್‌ನೆಸ್‌ ಫ್ರೀಕ್‌ ಕೂಡ ಹೌದು. ಆಕೆ ಫಿಟ್‌ನೆಸ್‌ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. 

ಆಗಾಗ ತಮ್ಮ ಬೋಲ್ಡ್‌ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುತ್ತಿರುತ್ತಾರೆ. 

ವಿಲ್‌ ಜಾಕ್ಸ್‌ಗೆ ತಮ್ಮ ಗರ್ಲ್‌ಫ್ರೆಂಡ್‌ ಜೊತೆ ಪಾರ್ಟಿ ಮಾಡುವುದು, ಪ್ರವಾಸಕ್ಕೆ ತೆರಳುವುದು ತುಂಬಾ ಇಷ್ಟ. 

ಅನಾ ಅವರು ಸಮಯ ಸಿಕ್ಕಾಗಲೆಲ್ಲಾ ಬೀಚ್‌ನಲ್ಲಿ ಕಾಲ ಕಳೆಯಲು ಇಷ್ಟಪಡುತ್ತಾರೆ. ಬೀಚ್‌ನಲ್ಲಿ ಬಿಕಿನಿ ತೊಟ್ಟ ಹಾಟ್‌ ಪೋಸ್‌ ನೀಡಿದ ಫೋಟೊವನ್ನೂ ಇವರು ಪೋಸ್ಟ್‌ ಮಾಡಿದ್ದಾರೆ.  

ವಿರಾಟ್ ಕೊಹ್ಲಿ ಅನುಭವಕ್ಕೆ ಸರಿಸಾಟಿ ಯಾರೂ ಇಲ್ಲ: ರಿಕಿ ಪಾಂಟಿಂಗ್