ಹೆಣ್ಣಿಗೆ ಸೀರೆ ಯಾಕೆ ಅಂದ; ಶ್ರೇಯಾಂಕಾ ಅಂದ-ಚಂದ

By Jayaraj
Sep 10, 2024

Hindustan Times
Kannada

ಕನ್ನಡತಿ ಶ್ರೇಯಾಂಕಾ ಪಾಟೀಲ್, ತಮ್ಮ ಗ್ಲಾಮರಸ್ ಸ್ಟೈಲ್‌ನಿಂದಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ.

ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ಆಲ್‌ರೌಂಡರ್‌, ಆರ್‌ಸಿಬಿ ವನಿತೆಯರ ತಂಡದ ಸ್ಟಾರ್ ಪ್ಲೇಯರ್ ಮತ್ತೊಮ್ಮೆ ಮಿಂಚಿದ್ದಾರೆ.

ಚಿನಕುರುಳಿ ಶ್ರೇಯಾಂಕಾ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ತಮ್ಮ ಫೋಟೋಸ್ ಹಂಚಿಕೊಳ್ಳುತ್ತಿರುತ್ತಾರೆ. 

ಈ ಬಾರಿ ಟಗರು ಪುಟ್ಟಿ ಸೀರೆಯುಟ್ಟು, 'ಹೆಣ್ಣಿಗೆ ಸೀರೆ ಯಾಕೆ ಅಂದ' ಎಂಬುದನ್ನು ತೋರಿಸಿದ್ದಾರೆ.

ಗಣೇಶ ಚತುರ್ಥಿ ಹಬ್ಬವನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸೀರೆಯುಟ್ಟು ವಿಜೃಂಭಣೆಯಿಂದ ಆಚರಿಸಿದರು.

ನೀಲಿ ಬಣ್ಣದ ಸೀರೆಗೆ ಕಪ್ಪು ಬಣ್ಣದ ಸಿಂಪಲ್‌ ಬ್ಲೌಸ್‌ ಧರಿಸಿದ್ದಾರೆ. ಕೂದಲು ಬಿಟ್ಟು ಮುದ್ದು ಮುದ್ದಾಗಿ ಸ್ಮೈಲ್‌ ಕೊಟ್ಟಿದ್ದಾರೆ.

ಫ್ಯಾಷನ್ ಟ್ರೆಂಡ್‌ ಚೆನ್ನಾಗಿ ಅನುಸರಿಸುವ ಶ್ರೇಯಾಂಕಾ ಸೀರೆಯಲ್ಲಿಯೂ ತುಂಬಾ ಫಿಟ್ ಆಗಿ ಕಾಣುತ್ತಿದ್ದಾರೆ.

ಶ್ರೇಯಾಂಕಾ ಇದುವರೆಗೆ ಭಾರತದ ಪರ ಒಟ್ಟು 3 ಏಕದಿನ ಪಂದ್ಯಗಳು ಮತ್ತು 12 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಜೈಪುರ ಪಿಂಕ್ ಪ್ಯಾಂಥರ್ಸ್​ಗೆ ನೂತನ ನಾಯಕ ಘೋಷಣೆ