ಅತ್ಯಧಿಕ ಮೇಡನ್ ಓವರ್​; ಭುವಿ ವಿಶ್ವದಾಖಲೆ ಮುರಿದ ಬುಮ್ರಾ

By Prasanna Kumar P N
Jun 06, 2024

Hindustan Times
Kannada

ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ವಿಶ್ವಕಪ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ವಿಶ್ವದಾಖಲೆ ಬರೆದಿದ್ದಾರೆ.

ಈ ಪಂದ್ಯದಲ್ಲಿ 6ನೇ ಓವರ್ ಎಸೆದ ಬುಮ್ರಾ, ಒಂದೇ ಒಂದು ರನ್ ನೀಡಲಿಲ್ಲ. ಅಂದರೆ ಬುಮ್ರಾ ಮೇಡನ್ ಹಾಕಿದರು.

ಈ ಮೂಲಕ ಬುಮ್ರಾ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ಮೇಡನ್ ಓವರ್ ಮಾಡಿದ ವಿಶ್ವದ ಮೊದಲ ಬೌಲರ್ ಎನಿಸಿದ್ದಾರೆ.

ಟಿ20ಐನಲ್ಲಿ ಜಸ್ಪ್ರೀತ್ ಅವರ 11ನೇ ಮೇಡನ್ ಓವರ್ ಇದಾಗಿದೆ. ಇದರೊಂದಿಗೆ ಭುವನೇಶ್ವರ್ ಕುಮಾರ್ ಅವರನ್ನು ಹಿಂದಿಕ್ಕಿದ್ದಾರೆ.

ಭುವನೇಶ್ವರ್ ಕುಮಾರ್ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 10 ಮೇಡನ್ ಓವರ್​​ಗಳನ್ನು ಹಾಕಿದ್ದಾರೆ.

ಈ ಪಂದ್ಯದಲ್ಲಿ 3 ಓವರ್​​​ ಬೌಲಿಂಗ್ ಮಾಡಿ ಕೇವಲ 6 ರನ್ ನೀಡಿ 2 ವಿಕೆಟ್ ಕಿತ್ತರು. ಒಂದು ಓವರ್​ ಮೇಡನ್ ಕೂಡ ಹಾಕಿದರು.

ಆರ್ಮಿಯಲ್ಲಿ ಸೇವೆ ಸಲ್ಲಿಸಿದ ಭಾರತೀಯ ಕ್ರೀಡಾಪಟುಗಳು