ಕ್ರಿಸ್​ಗೇಲ್ ದಾಖಲೆ ಪುಡಿಗಟ್ಟಿದ ನಿಕೋಲಸ್ ಪೂರನ್

By Prasanna Kumar P N
Jun 18, 2024

Hindustan Times
Kannada

ಟಿ20 ವಿಶ್ವಕಪ್​​ ಗುಂಪು ಹಂತದ 40ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 8 ಸಿಕ್ಸರ್​ ಸಿಡಿಸಿದ ನಿಕೋಲಸ್ ಪೂರನ್ ದಾಖಲೆ ಬರೆದಿದ್ದಾರೆ.

53 ಎಸೆತಗಳಲ್ಲಿ 6 ಬೌಂಡರಿ, 8 ಸಿಕ್ಸರ್ ಸಹಿತ 98 ರನ್​ಗಳಿಸಿ ಶತಕ ವಂಚಿತರಾದರು. ಆದರೆ, ಸಿಕ್ಸರ್​ಗಳ ವಿಚಾರದಲ್ಲಿ ಕ್ರಿಸ್​ಗೇಲ್ ದಾಖಲೆಯನ್ನು ಪುಡಿಗಟ್ಟಿದ್ದಾರೆ.

8 ಸಿಕ್ಸರ್​​ಗಳೊಂದಿಗೆ ವೆಸ್ಟ್ ಇಂಡೀಸ್ ಪರ ಅತ್ಯಧಿಕ ಸಿಕ್ಸರ್​ಗಳನ್ನು ಕಲೆ ಹಾಕಿದ್ದಾರೆ. ಅಗ್ರಸ್ಥಾನದಲ್ಲಿದ್ದ ಗೇಲ್​ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.

ತಮ್ಮ ದೇಶದ ಪರ ನಿಕೋಲಸ್ ಪೂರನ್ 128 ಸಿಕ್ಸರ್ ಸಿಡಿಸಿದ್ದರೆ, ಕ್ರಿಸ್​ಗೇಲ್ 124 ಸಿಕ್ಸರ್​ ಚಚ್ಚಿದ್ದಾರೆ.

ಇವರ ನಂತರ ಎವಿನ್ ಲೆವಿಸ್ (111), ಕೀರಾನ್ ಪೊಲಾರ್ಡ್ (99) ಮತ್ತು ರೋವ್ಮನ್ ಪೊವೆಲ್ (90) ಸ್ಥಾನ ಪಡೆದಿದ್ದಾರೆ.

ಭಾರತದ ರೈಲು ನಿಲ್ದಾಣಗಳಲ್ಲಿ ಸಿಗುವ 10 ಜನಪ್ರಿಯ ತಿನಿಸುಗಳಿವು