ಪ್ಯಾಟ್ ಕಮಿನ್ಸ್ ಹ್ಯಾಟ್ರಿಕ್ ವಿಕೆಟ್ ಸಾಧನೆ

By Jayaraj
Jun 21, 2024

Hindustan Times
Kannada

ಬಾಂಗ್ಲಾದೇಶ ವಿರುದ್ಧದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್‌ ಕಮಿನ್ಸ್‌ ದಾಖಲೆ ನಿರ್ಮಿಸಿದ್ದಾರೆ.

ಬ್ರೆಟ್ ಲೀ ನಂತರ ಟಿ20 ವಿಶ್ವಕಪ್ ಹ್ಯಾಟ್ರಿಕ್ ಪಡೆದ ಆಸ್ಟ್ರೇಲಿಯಾದ ಮೊದಲ ಬೌಲರ್‌ ಎನಿಸಿಕೊಂಡರು.

ಮಹಮುದುಲ್ಲಾ, ಮಹೆದಿ ಹಸನ್ ಮತ್ತು ತೌಹಿದ್ ಹೃದೋಯ್ ವಿಕೆಟ್‌ ಕಬಳಿಸಿದ ಕಮಿನ್ಸ್ ಈ ಸಾಧನೆ ಮಾಡಿದರು. 

ಟಿ20 ವಿಶ್ವಕಪ್‌ 2024ರ ಆವೃತ್ತಿಯಲ್ಲಿ ಇದು ಮೊದಲ ಹ್ಯಾಟ್ರಿಕ್ ಸಾಧನೆಯಾಗಿದೆ.

ಟಿ20 ವಿಶ್ವಕಪ್‌ ಇತಿಹಾಸದಲ್ಲೇ ಒಟ್ಟಾರೆಯಾಗಿ ಹ್ಯಾಟ್ರಿಕ್‌ ಸಾಧನೆ ಮಾಡಿದ ವಿಶ್ವದ 7ನೇ ಬೌಲರ್‌ ಎಂಬ ಖ್ಯಾತಿಗೆ ಕಮಿನ್ಸ್‌ ಪಾತ್ರರಾದರು.

ಈ ಹಿಂದೆ ಬ್ರೆಟ್‌ ಲೀ, ಕರ್ಟಿಸ್ ಕ್ಯಾಂಫರ್, ವನಿಂದು ಹಸರಂಗಾ, ಕಗಿಸೋ ರಬಾಡ, ಕಾರ್ತಿಕ್ ಮೇಯಪ್ಪನ್ ಹಾಗೂ ಜೋಶುವಾ ಲಿಟಲ್ ಈ ಸಾಧನೆ ಮಾಡಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಈವರೆಗೆ ಆಸೀಸ್‌ನ ನಾಲ್ವರು ಬೌಲರ್‌ಗಳು ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ

ಬ್ರೆಟ್‌ ಲೀ, ಆಷ್ಟನ್‌ ಅಗರ್‌, ನಥನ್‌ ಎಲ್ಲಿಸ್‌ ಬಳಿಕ ಇದೀಗ ಕಮಿನ್ಸ್‌ ಈ ಸಾಧನೆ ಮಾಡಿದ್ದಾರೆ

ಮೂಗುತಿ ಸುಂದರಿಯಾದ ಮೇಘಾ ಶೆಟ್ಟಿ ವಯಸ್ಸೆಷ್ಟು?