ದಿಗ್ಗಜ ಸಾಧಕರ ಪಟ್ಟಿ ಸೇರಲು ಜಡೇಜಾಗೆ ಬೇಕು ಕೇವಲ 1 ವಿಕೆಟ್

By Jayaraj
Sep 24, 2024

Hindustan Times
Kannada

ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತೊಂದು ಟೆಸ್ಟ್ ದಾಖಲೆಯ ಹೊಸ್ತಿಲಲ್ಲಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಕಾನ್ಪುರ ಟೆಸ್ಟ್‌ನಲ್ಲಿ ಕೇವಲ ಒಂದು ವಿಕೆಟ್ ಪಡೆದರೆ, ವಿಶೇಷ ದಾಖಲೆ ನಿರ್ಮಾಣವಾಗಲಿದೆ.

ಜಡೇಜಾ ಈವರೆಗೆ ಟೆಸ್ಟ್‌ ಕರಿಯರ್‌ನಲ್ಲಿ 299 ವಿಕೆಟ್‌ ಪಡೆದಿದ್ದಾರೆ. ಕಾನ್ಪುರದಲ್ಲಿ 1 ವಿಕೆಟ್ ಪಡೆದ ತಕ್ಷಣ ಅವರು ವಿಶೇಷ ಪಟ್ಟಿಗೆ ಸೇರಲಿದ್ದಾರೆ.

ಟೆಸ್ಟ್‌ ವೃತ್ತಿಜೀವನದಲ್ಲಿ 300 ವಿಕೆಟ್ ಮತ್ತು 3 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಜಡ್ಡು ಸ್ಥಾನ ಪಡೆಯುತ್ತಾರೆ. ಜಡೇಜಾ ಈ ಸ್ವರೂಪದಲ್ಲಿ ಈವರೆಗೆ ಒಟ್ಟು 3122 ರನ್ ಗಳಿಸಿದ್ದಾರೆ.

ಈವರೆಗೆ ಭಾರತದ ಆರ್ ಅಶ್ವಿನ್ ಮತ್ತು ಕಪಿಲ್ ದೇವ್ ಸೇರಿದಂತೆ ವಿಶ್ವದ ಕೇವಲ 10 ಆಟಗಾರರು ಮಾತ್ರ ಈ ಸಾಧನೆ ಮಾಡಿದ್ದಾರೆ.

ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಆರ್ ಅಶ್ವಿನ್, ಈವರೆಗೆ 101 ಟೆಸ್ಟ್ ಪಂದ್ಯಗಳಲ್ಲಿ 522 ವಿಕೆಟ್ ಹಾಗೂ 3422 ರನ್ ಗಳಿಸಿದ್ದಾರೆ.

ಮಾಜಿ ಕ್ರಿಕೆಟಿಗ ಕಪಿಲ್ ದೇವ್ 131 ಟೆಸ್ಟ್ ಪಂದ್ಯಗಳಲ್ಲಿ 434 ವಿಕೆಟ್ ಮತ್ತು 5248 ರನ್ ಗಳಿಸಿದ್ದಾರೆ.

ಉಳಿದಂತೆ ಇಯಾನ್ ಬೋಥಮ್, ಡೇನಿಯಲ್ ವೆಟ್ಟೋರಿ, ಇಮ್ರಾನ್ ಖಾನ್, ಶಾನ್ ಪೊಲಾಕ್, ಸ್ಟುವರ್ಟ್ ಬ್ರಾಡ್, ಶೇನ್ ವಾರ್ನ್, ರಿಚರ್ಡ್ ಹ್ಯಾಡ್ಲಿ ಮತ್ತು ಚಾಮಿಂದಾ ವಾಸ್ ಈ ಸಾಧನೆ ಮಾಡಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವು ಸೆಪ್ಟೆಂಬರ್ 27ರಿಂದ ಕಾನ್ಪುರದಲ್ಲಿ  ನಡೆಯಲಿದೆ.

ಚಿಕ್ಕಮಗಳೂರು ಜಿಲ್ಲೆ ಹರಿಹರಪುರ ಶಾರದೆಗಿಂದು ಮಯೂರವಾಹಿನಿ ಅಲಂಕಾರ