ಬಾಂಗ್ಲಾದೇಶ ವಿರುದ್ಧ ಸಿಕ್ಸರ್ ದಾಖಲೆಯತ್ತ ಕಣ್ಣಿಟ್ಟ ರೋಹಿತ್ ಶರ್ಮಾ
By Jayaraj
Sep 14, 2024
Hindustan Times
Kannada
ಸೆಪ್ಟೆಂಬರ್ 19ರಿಂದ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಕಣಕ್ಕಿಳಿಯಯುತ್ತಿದೆ.
ಈ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ ಮಹತ್ವದ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರನಾಗಿ ಹೊರಹೊಮ್ಮಲು ಹಿಟ್‌ಮ್ಯಾನ್‌ಗೆ ಕೇವಲ 7 ಸಿಕ್ಸರ್‌ಗಳ ಅಗತ್ಯವಿದೆ.
ಈಗಾಗಲೇ ರೋಹಿತ್ 84 ಸಿಕ್ಸರ್ ಸಿಡಿಸಿದ್ದಾರೆ. ಭಾರತದ ಪರ ಅತಿ ಹೆಚ್ಚು ಸಿಕ್ಸರ್ (84) ಸಿಡಿಸಿದ ದಾಖಲೆ ವೀರೇಂದ್ರ ಸೆಹ್ವಾಗ್ ಹೆಸರಲ್ಲಿದೆ.
ಇದೇ ವೇಳೆ, ರೋಹಿತ್ ಇನ್ನು 16 ಸಿಕ್ಸರ್ ಸಿಡಿಸಿದರೆ, ಮತ್ತೊಂದು ದಾಖಲೆ ನಿರ್ಮಾಣವಾಗಲಿದೆ.
ಟೆಸ್ಟ್‌ನಲ್ಲಿ 100 ಸಿಕ್ಸ್ ಸಿಡಿಸಿದ ಮೊದಲ ಭಾರತೀಯ ಎನಿಸಿಕೊಳ್ಳಲಿದ್ದಾರೆ.
ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವು ಸೆ.19-23ರವರೆಗೆ ಚೆನ್ನೈನಲ್ಲಿ ನಡೆಯಲಿದೆ. 2ನೇ ಟೆಸ್ಟ್ ಸೆ.27ರಿಂದ ಅಕ್ಟೋಬರ್ 01ರವರೆಗೆ ಕಾನ್ಪುರದಲ್ಲಿ ನಡೆಯಲಿದೆ.
ಈರುಳ್ಳಿ, ಬೆಳ್ಳುಳ್ಳಿ ಹಾಕದೆ ತಯಾರಿಸಬಹುದು ರುಚಿಕರವಾದ ಸಬ್ಬಕ್ಕಿ ಹಪ್ಪಳ
slurrp
ಮುಂದಿನ ಸ್ಟೋರಿ ಕ್ಲಿಕ್ ಮಾಡಿ