ತವರಿನಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್; ಕುಂಬ್ಳೆ‌ ದಾಖಲೆ ಹಿಂದಿಕ್ಕಿದ ಅಶ್ವಿನ್

By Jayaraj
Feb 26, 2024

Hindustan Times
Kannada

ತಮ್ಮದೇ ನೆಲದಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್‌ ಪಡೆದ ಅಗ್ರ ಆರು ಸ್ಪಿನ್ನರ್‌ಗಳು ಇವರು.

1. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ತಮ್ಮದೇ ದೇಶದಲ್ಲಿ ಟೆಸ್ಟ್‌ನಲ್ಲಿ 493 ವಿಕೆಟ್‌ ಪಡೆದಿದ್ದಾರೆ.

2. ಭಾರತದ ರವಿಚಂದ್ರನ್ ಅಶ್ವಿನ್ ಇದುವರೆಗೆ ತವರಿನಲ್ಲಿ 354 ಟೆಸ್ಟ್ ವಿಕೆಟ್ ಕಬಳಿಸಿದ್ದಾರೆ.

3. ಅನಿಲ್ ಕುಂಬ್ಳೆ ಅವರು ಭಾರತದಲ್ಲಿ 350 ಟೆಸ್ಟ್ ವಿಕೆಟ್‌ ಪಡೆದಿದ್ದಾರೆ.

4. ಆಸ್ಟ್ರೇಲಿಯಾದ ಶೇನ್ ವಾರ್ನ್ ತವರಿನಲ್ಲಿ 319 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

5. ಶ್ರೀಲಂಕಾದ ರಂಗನಾ ಹೆರಾತ್ ತಮ್ಮ ದೇಶದಲ್ಲಿ ಒಟ್ಟು 278 ಟೆಸ್ಟ್ ವಿಕೆಟ್‌ ಕಬಳಿಸಿದ್ದಾರೆ.

6. ಹರ್ಭಜನ್ ಸಿಂಗ್ ತವರಿನಲ್ಲಿ 265 ವಿಕೆಟ್ ಪಡೆದಿದ್ದಾರೆ.

ಭಾರತದ ಬೌಲರ್‌ಗಳಲ್ಲಿ ರವಿಚಂದ್ರನ್ ಅಶ್ವಿನ್ ತವರಿನಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ದಾಖಲೆ ನಿರ್ಮಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ರಾಂಚಿ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಅಶ್ವಿನ್ 5 ವಿಕೆಟ್ ಪಡೆಯುವ ಮೂಲಕ ಕುಂಬ್ಳೆ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಲೋಕಸಭಾ ಚುನಾವಣೆ 2024 - ಏಪ್ರಿಲ್ 26ಕ್ಕೆ ಮತದಾನ -ಮರೆಯಬೇಡಿ ಮತ್ತೆ... 

@ceo_karnataka