ಅಮೆರಿಕ ವಿರುದ್ಧ ಸೋತು ಕೆಟ್ಟ ದಾಖಲೆ ಬರೆದ ಪಾಕಿಸ್ತಾನ
By Prasanna Kumar P N
Jun 07, 2024
Hindustan Times
Kannada
ಟಿ20 ವಿಶ್ವಕಪ್ನ ಗುಂಪು ಹಂತದ 11ನೇ ಪಂದ್ಯದಲ್ಲಿ ಅಮೆರಿಕ ವಿರುದ್ಧ ಸೋತ ಬಲಿಷ್ಠ ಪಾಕಿಸ್ತಾನ, ಕ್ರಿಕೆಟ್ ಇತಿಹಾಸದಲ್ಲಿ ಕೆಟ್ಟ ದಾಖಲೆ ಬರೆಯಿತು.
ಡಲ್ಲಾಸ್ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನ ತಂಡವು ಸೂಪರ್ ಓವರ್ನಲ್ಲಿ ಹೀನಾಯ ಸೋಲು ಅನುಭವಿಸಿ ಮುಖಭಂಗಕ್ಕೆ ಒಳಗಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಾಕ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಅಮೆರಿಕ ಸಹ ಅಷ್ಟೇ ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಅಷ್ಟೇ ರನ್ ಕಲೆ ಹಾಕಿತು.
ಪಂದ್ಯ ಟೈನಲ್ಲಿ ಅಂತ್ಯಗೊಂಡ ಕಾರಣ ಸೂಪರ್ ಓವರ್ ನಡೆಸಲಾಯಿತು. ಈ ಓವರ್ನಲ್ಲಿ ಅಮೆರಿಕ ಮೊದಲು ಬ್ಯಾಟಿಂಗ್ ನಡೆಸಿ 18 ರನ್ ಪೇರಿಸಿತು.
ಆದರೆ ಸೂಪರ್ ಓವರ್ನಲ್ಲಿ ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ್ ಗಳಿಸಿದ್ದು ಕೇವಲ 13 ರನ್ ಮಾತ್ರ. 5 ರನ್ಗಳ ಅಂತರದಿಂದ ಹೀನಾಯ ಸೋಲಿಗೆ ಶರಣಾಗಿ ಕಳಪೆ ದಾಖಲೆಯೂ ಬರೆಯಿತು.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಪೂರ್ಣ ಸದಸ್ಯರಲ್ಲದ ತಂಡದ ವಿರುದ್ಧ ಇದೇ ಮೊದಲ ಬಾರಿಗೆ ಸೋಲುವ ಮೂಲಕ ಪಾಕಿಸ್ತಾನ ಕುಖ್ಯಾತಿಗೆ ಒಳಗಾಗಿದೆ.
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ