ಟ್ರಾವಿಸ್ ಹೆಡ್ ವಿನಾಶಕಾರಿ ಆಟಕ್ಕೆ ಕ್ರಿಸ್ ಗೇಲ್, ಸುನಿಲ್ ನರೇನ್ ದಾಖಲೆ ಉಡೀಸ್
By Prasanna Kumar P N May 09, 2024
Hindustan Times Kannada
ಐಪಿಎಲ್-2024ರಲ್ಲಿ ಟ್ರಾವಿಸ್ ಮತ್ತೊಂದು ದಾಖಲೆ ಬರೆದಿದ್ದು, ಸುನಿಲ್ ನರೇನ್ ಮತ್ತು ಕ್ರಿಸ್ ಗೇಲ್ ರೆಕಾರ್ಡ್ ಮುರಿದಿದ್ದಾರೆ.
ಐಪಿಎಲ್ನ 57ನೇ ಪಂದ್ಯದಲ್ಲಿ ಎಲ್ಎಸ್ಜಿ ವಿರುದ್ಧ ಸ್ಫೋಟಕ ಅರ್ಧಶತಕ ಸಿಡಿಸಿದ ಹೆಡ್ ಈ ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ 30 ಎಸೆತಗಳಲ್ಲಿ 8 ಬೌಂಡರಿ, 8 ಸಿಕ್ಸರ್ ಸಹಿತ 89 ರನ್ ಸಿಡಿಸಿದ್ದಾರೆ.
ಶ್ರೀಮಂತ ಲೀಗ್ ಇತಿಹಾಸದಲ್ಲಿ ಪವರ್ಪ್ಲೇನಲ್ಲೇ ಅತ್ಯಧಿಕ ಅರ್ಧಶತಕ ಬಾರಿಸಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಒಳಗಾಗಿದ್ದಾರೆ.
ಮೊದಲ ಸ್ಥಾನದಲ್ಲಿರುವ ಡೇವಿಡ್ ವಾರ್ನರ್ 6 ಬಾರಿ ಈ ಸಾಧನೆ ಮಾಡಿದ್ದಾರೆ. ಆದರೆ ಹೆಡ್ 4 ಸಲ 50ರ ಗಡಿ ದಾಟಿದ್ದಾರೆ.
ಪವರ್ಪ್ಲೇನಲ್ಲೇ ಸಿಡಿಸಿರುವ ನಾಲ್ಕು ಅರ್ಧಶತಕಗಳು ಸಹ ಇದೇ 2024ರ ಐಪಿಎಲ್ನಲ್ಲೇ ಬಂದಿರುವುದು ವಿಶೇಷ.
ಉಳಿದಂತೆ ಕ್ರಿಸ್ ಗೇಲ್ ಮತ್ತು ಸುನಿಲ್ ನರೇನ್ ತಲಾ 3 ಬಾರಿ ಪವರ್ಪ್ಲೇ ಒಳಗೆ ಅರ್ಧಶತಕ ಸಿಡಿಸಿದ್ದಾರೆ. ನಾಲ್ಕು ಬಾರಿ ಸಾಧನೆ ಮಾಡುವ ಮೂಲಕ ಈ ಇಬ್ಬರನ್ನೂ ಹೆಡ್ ಹಿಂದಿಕ್ಕಿದ್ದಾರೆ.
ಚಳಿಗಾಲದಲ್ಲಿ ದಾಲ್ಚಿನ್ನಿ ಸೇವಿಸುವುದರಿಂದ ಸಿಗುತ್ತೆ ಈ ಆರೋಗ್ಯ ಪ್ರಯೋಜನಗಳು