ಟ್ರಾವಿಸ್ ಹೆಡ್ ಸ್ಫೋಟಕ ಫಿಫ್ಟಿಗೆ ಜೇಕ್​ ಫ್ರೇಸರ್​ ದಾಖಲೆ ಸಮ

By Prasanna Kumar P N
May 09, 2024

Hindustan Times
Kannada

ಎಲ್​ಎಸ್​ಜಿ ವಿರುದ್ಧ ಎಸ್​ಆರ್​ಹೆಚ್ ಪರ ಟ್ರಾವಿಸ್ ಹೆಡ್ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಡೆಲ್ಲಿ ಕ್ಯಾಪಿಟಲ್ಸ್ ಜೇಕ್​ ಫ್ರೇಸರ್​ ಮೆಕ್​ಗುರ್ಕ್ ದಾಖಲೆ ಸರಿಗಟ್ಟಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ 20 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅತಿ ಹೆಚ್ಚು ಬಾರಿ 50 ಪ್ಲಸ್ ಸ್ಕೋರ್ ಮಾಡಿರುವ ಆಟಗಾರರ ಪೈಕಿ ಟ್ರಾವಿಸ್ ಹೆಡ್ 2ನೇ ಸ್ಥಾನದಲ್ಲಿದ್ದಾರೆ.

ಜೇಕ್ ಫ್ರೇಸರ್​ ಮೆಕ್​ಗುರ್ಕ್​ ಈ ಸಾಧನೆ ಮಾಡಿದ ಮೊದಲ ಆಟಗಾರ. ಇಬ್ಬರು ಸಹ ಇದೇ ಐಪಿಎಲ್​ನಲ್ಲಿ 20ಕ್ಕಿಂತ ಕಡಿಮೆ ಎಸೆತಗಳಲ್ಲಿ ತಲಾ 3 ಬಾರಿ ಅರ್ಧಶತಕ ಚಚ್ಚಿದ್ದಾರೆ.

ಇದೇ ವೇಳೆ ಟ್ರಾವಿಸ್ ಹೆಡ್ 6 ಆಟಗಾರರ ದಾಖಲೆ ಹಿಂದಿಕ್ಕಿದ್ದಾರೆ. ಸುನಿಲ್ ನರೇನ್, ಕಿರನ್ ಪೊಲಾರ್ಡ್, ಇಶಾನ್ ಕಿಶನ್, ನಿಕೋಲಸ್ ಪೂರನ್, ಯಶಸ್ವಿ ಜೈಸ್ವಾಲ್ ತಲಾ 2 ಬಾರಿ ಈ ಸಾಧನೆ ಮಾಡಿದ್ದಾರೆ.

ಎಲ್​ಎಸ್​ಜಿ ವಿರುದ್ಧ 30 ಎಸೆತಗಳಲ್ಲಿ 8 ಬೌಂಡರಿ, 8 ಸಿಕ್ಸರ್​ ಸಹಿತ ಅಜೇಯ 89 ರನ್ ಗಳಿಸಿದರು. ಈ ಟೂರ್ನಿಯಲ್ಲಿ ಮೂರು ಬಾರಿಯೂ ತಲಾ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ.

ಐಪಿಎಲ್ 2024ರ ಟಾಪ್ 5 ಅತಿ ಉದ್ದದ ಸಿಕ್ಸರ್