ಡೇವಿಡ್ ವಾರ್ನರ್​ರ ಬೃಹತ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ

By Prasanna Kumar P N
Apr 29, 2024

Hindustan Times
Kannada

ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ. 17ನೇ ಆವೃತ್ತಿಯ ಐಪಿಎಲ್​ನಲ್ಲಿ ಕೊಹ್ಲಿ 500 ರನ್​ಗಳ ಗಡಿ ದಾಟಿದರು.

ಆ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಸೀಸನ್​ಗಳಲ್ಲಿ 500+ ಸ್ಕೋರ್ ಮಾಡಿದ 2ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತದ ಮೊದಲ ಆಟಗಾರ.

ಇದರೊಂದಿಗೆ ಡೇವಿಡ್ ವಾರ್ನರ್ ಅವರ ದಾಖಲೆಯನ್ನು ವಿರಾಟ್ ಕೊಹ್ಲಿ ಸರಿಗಟ್ಟಿದ್ದಾರೆ. ಶ್ರೀಮಂತ ಲೀಗ್​​ನಲ್ಲಿ ವಾರ್ನರ್ 7 ಬಾರಿ 500 + ರನ್ ಸಿಡಿಸಿದ್ದಾರೆ. ಈಗ ಕೊಹ್ಲಿ ಕೂಡ ಈ ಎಲೈಟ್​ ಕ್ಲಬ್​ಗೆ ಸೇರಿದ್ದಾರೆ.

ಕೊಹ್ಲಿ ಅವರ 500+ ರನ್ ಗಳಿಸಿದ ಪಟ್ಟಿ ಇಲ್ಲಿದೆ. 2011ರಲ್ಲಿ 557 ರನ್, 2013ರಲ್ಲಿ 634 ರನ್, 2015ರಲ್ಲಿ 505 ರನ್, 2016ರಲ್ಲಿ 973 ರನ್, 2018ರಲ್ಲಿ 530 ರನ್, 2023ರಲ್ಲಿ 639 ರನ್, 2024ರಲ್ಲಿ 500* ರನ್.

ಸಹೋದರರ ದಿನದಂದು ಕೊನೆ ಕ್ಷಣದಲ್ಲಿ ಗಿಫ್ಟ್‌ ಕೊಡಲು ಯೋಚಿಸಿದ್ದರೆ ಇಲ್ಲಿದೆ ಐಡಿಯಾ