ಸದಾ ಫಿಟ್‌ ಆಗಿರಲು ಏನ್‌ ಮಾಡ್ತಾರೆ ಅನುಷ್ಕಾ ಶರ್ಮಾ?

By Jayaraj
Feb 28, 2024

Hindustan Times
Kannada

ಬಾಲಿವುಡ್‌ ನಟಿ ಹಾಗೂ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಫಿಟ್‌ ಹಾಗೂ ಆರೋಗ್ಯವಾಗಿದ್ದಾರೆ.

ಅನುಷ್ಕಾ ಅವರ ಆರೋಗ್ಯದ ಗುಟ್ಟೇನು? ಫಿಟಿ ಆಗಿರಲು ಅವರು ಏನ್‌ ಮಾಡ್ತಾರೆ ಎಂಬುದು ಹಲವರ ಪ್ರಶ್ನೆ

ಫಿಟ್‌ ಆಗಿರಲು ಅನುಷ್ಕಾ ನಿತ್ಯ ಎಕ್ಸರ್‌ಸೈಸ್‌ ಹಾಗೂ ಯೋಗ ಮಾಡುತ್ತಾರೆ.

ಪ್ರತಿನಿತ್ಯ 7-8 ಗಂಟೆಗಳ ಕಾಲ ನಿದ್ದೆ ಮಾಡ್ತಾರೆ

ಫಿಟ್‌ನೆಸ್‌ಗಾಗಿ ಫೋಷಕಾಂಶಗಳಿರುವ ಆಹಾರ ಸೇವಿಸ್ತಾರೆ. ತಮ್ಮ ಡಯೆಟ್‌ ಅನ್ನು ಕ್ರಮಬದ್ಧವಾಗಿ ನಿಭಾಯಿಸುತ್ತಾರೆ.

ದಿನವನ್ನು ಒಂದು ಲೋಟ ನೀರು ಕುಡಿಯುವುದರೊಂದಿಗೆ ಆರಂಭಿಸುವ ಅನುಷ್ಕಾ, ಒಂದು ದಿನದಲ್ಲಿ ಕನಿಷ್ಠ 7-8 ಲೋಟ ನೀರು ಕುಡಿಯುತ್ತಾರೆ.

ಊಟದೊಂದಿಗೆ ಹಣ್ಣು ಹಾಗೂ ತರಕಾರಿ ಸೇವಿಸ್ತಾರೆ. ನಿರಂತರವಾಗಿ ಬೇಳೆ ಬಳಸುತ್ತಾರೆ. ಹಣ್ಣಿನ ರಸ ಕೂಡಾ ಕುಡಿಯುತ್ತಾರೆ.

ರಾತ್ರಿ ಊಟವನ್ನು ಅವರು ಸರಳವಾಗಿ ಮುಗಿಸುತ್ತಾರೆ. ಜೀರ್ಣಕ್ರಿಯೆಗೆ ನೆರವಾಗುವ ಹಾಗೂ ಉತ್ತಮ ನಿದ್ದೆ ಬರುವಂತೆ ಆಹಾರ ಸೇವಿಸುತ್ತಾರೆ.

ಗುಜರಾತ್ ಟೈಟಾನ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ ದಾಖಲೆ