350 ಟಿ20 ವಿಕೆಟ್‌ ಕಬಳಿಸಿ ವಿಶ್ವದಾಖಲೆ ಬರೆದ ಯುಜ್ವೇಂದ್ರ ಚಾಹಲ್

By Jayaraj
May 07, 2024

Hindustan Times
Kannada

ಟಿ20 ಕ್ರಿಕೆಟ್‌ನಲ್ಲಿ 350 ವಿಕೆಟ್‌ ಕಬಳಿಸಿದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ಪರ ರಿಷಬ್ ಪಂತ್ ವಿಕೆಟ್‌ ಪಡೆಯುವ ಮೂಲಕ ಈ ಮೈಲಿಗಲ್ಲು ತಲುಪಿದ್ದಾರೆ.

ತಮ್ಮ 301ನೇ ಟಿ20 ಪಂದ್ಯದಲ್ಲಿ ಚಾಹಲ್‌ ಈ ದಾಖಲೆ ಬರೆದಿದ್ದಾರೆ.

ಮುಂಬೈ ಇಂಡಿಯನ್ಸ್‌ ಅನುಭವಿ ಬೌಲರ್ ಪಿಯೂಷ್ ಚಾವ್ಲಾ, 310 ವಿಕೆಟ್‌ಗಳೊಂದಿಗೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಜಾಗತಿಕವಾಗಿ ಟಿ20ಯಲ್ಲಿ ಅಧಿಕ ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಚಾಹಲ್ 11 ನೇ ಸ್ಥಾನದಲ್ಲಿದ್ದಾರೆ.

ಸ್ಪಿನ್ನರ್‌ಗಳ ಪೈಕಿ ಯೂಜಿ 5ನೇ ಸ್ಥಾನದಲ್ಲಿದ್ದು, ರಶೀದ್‌ ಖಾನ್‌ 572 ವಿಕೆಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಡ್ವೇನ್ ಬ್ರಾವೋ 574 ಪಂದ್ಯಗಳಲ್ಲಿ 625 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಐಪಿಎಲ್‌ನಲ್ಲಿಯೂ ಅಧಿಕ ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಯೂಜಿ ಅಗ್ರಸ್ಥಾನದಲ್ಲಿದ್ದಾರೆ.

PTI

ಗದಗ ನಗರದಲ್ಲಿ 1998ರಲ್ಲಿ ಆರಂಭಗೊಂಡ ವಸ್ತುಸಂಗ್ರಹಾಲಯದಲ್ಲಿ 700 ಪ್ರಾಚ್ಯವಸ್ತುಗಳ ಸಂಗ್ರಹವಿದೆ.