ದಕ್ಷಿಣ ಆಫ್ರಿಕಾದಲ್ಲಿ ಇತಿಹಾಸ ನಿರ್ಮಿಸಿದ ಪಾಕಿಸ್ತಾನ ತಂಡ

By Jayaraj
Dec 23, 2024

Hindustan Times
Kannada

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ 36 ರನ್‌ಗಳಿಂದ ಗೆದ್ದಿದೆ. 

ಟಿ20 ಸರಣಿಯನ್ನು 2-0 ಅಂತರದಿಂದ ಸೋತ ನಂತರ, ಇದೀಗ ಏಕದಿನ ಸ್ವರೂಪದಲ್ಲಿ ಹರಿಣಗಳ ವಿರುದ್ಧ 3-0 ಅಂತರದಿಂದ ಕ್ಲೀನ್‌ ಸ್ವೀಪ್‌ ಸಾಧಿಸಿದೆ.

ಪಾಕಿಸ್ತಾನ ಕ್ರಿಕೆಟ್ ತಂಡವು ಮೊಹಮ್ಮದ್ ರಿಜ್ವಾನ್ ನಾಯಕತ್ವದಲ್ಲಿ ಗೆಲುವಿನ ಓಟ ಆರಂಭಿಸಿದೆ.

ಇಲ್ಲಿಯವರೆಗೆ, ರಿಜ್ವಾನ್ ನಾಯಕತ್ವದಲ್ಲಿ ಆಡಿದ ಆರು ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನ ಐದರಲ್ಲಿ ಗೆದ್ದಿದೆ. 

ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನೆಲದಲ್ಲಿ ಏಕದಿನ ಸರಣಿ ಗೆದ್ದ ಪಾಕಿಸ್ತಾನದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ರಿಜ್ವಾನ್‌ ಪಾತ್ರರಾಗಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ ಮಾಡಿ ಪಾಕಿಸ್ತಾನವು ಇತಿಹಾಸ ನಿರ್ಮಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು ವೈಟ್‌ವಾಶ್ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದಕ್ಕೂ ಮೊದಲು, ಪ್ರೋಟೀಸ್ ವಿರುದ್ಧ ಮೂರು ಏಕದಿನ ಸರಣಿ ಗೆದ್ದ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಪಾಕ್‌ ಪಾತ್ರವಾಗಿದೆ.

ಟಿ20 ವಿಶ್ವಕಪ್ ಬಳಿಕ ಕ್ಷೀಣಿಸಿದ ಕ್ರಿಕೆಟ್ ನೋಡುಗರ ಸಂಖ್ಯೆ, ಏಕೆ?