ಟಿ20 ವಿಶ್ವಕಪ್ ಬಳಿಕ ಕ್ಷೀಣಿಸಿದ ಕ್ರಿಕೆಟ್ ನೋಡುಗರ ಸಂಖ್ಯೆ, ಏಕೆ?

By Prasanna Kumar P N
Dec 23, 2024

Hindustan Times
Kannada

ನೂತನ ವರ್ಷಕ್ಕೆ ಕಾಲಿಡಲು ಕೆಲವೇ ದಿನಗಳು ಬಾಕಿ ಇದ್ದು, ಎಲ್ಲಾ ಕ್ಷೇತ್ರಗಳಂತೆ ಕ್ರೀಡಾ ಕ್ಷೇತ್ರವೂ 2024ರಲ್ಲಿ ಹಲವು ಏರಿಳಿತ ಕಂಡಿದೆ.

ಅದರಲ್ಲೂ ಕ್ರಿಕೆಟ್​ನಲ್ಲಿ ಭಾರತ ತಂಡ ಟಿ20 ವಿಶ್ವಕಪ್ ಗೆದ್ದಿರುವ ಸಂಭ್ರಮದ ನಡುವೆಯೇ ಕಹಿ ಸುದ್ದಿಯನ್ನೂ ಕಂಡಿದ್ದಾರೆ ಫ್ಯಾನ್ಸ್.

ವಿಶ್ವಕಪ್ ಗೆದ್ದಿದ್ದು ಎಷ್ಟು ಖುಷಿ ಕೊಟ್ಟಿತೋ, ರೋಹಿತ್​ ಶರ್ಮಾ, ವಿರಾಟ್ ಕೊಹ್ಲಿ, ಜಡೇಜಾ ಟಿ20ಐಗೆ ವಿದಾಯ ಹೇಳಿದ್ದು ಅಷ್ಟೇ ನೋವು ಕೊಟ್ಟಿತು.

ಅಚ್ಚರಿಯ ಸಂಗತಿ ಏನೆಂದರೆ ಈ ಮೂವರು ದಿಗ್ಗಜರು ಚುಟುಕು ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕ ಕ್ರಿಕೆಟ್ ನೋಡುಗರ ಸಂಖ್ಯೆ ತಕ್ಕ ಮಟ್ಟಿಗೆ ಕುಸಿಯಿತು ಎಂದೂ ಹೇಳಲಾಗುತ್ತಿದೆ.

ಕೊಹ್ಲಿ, ರೋಹಿತ್​, ಜಡೇಜಾ ಅತಿ ದೊಡ್ಡ ಅಭಿಮಾನಿಗಳ ಸಂಖ್ಯೆ ಹೊಂದಿದ್ದಾರೆ. ತಮ್ಮ ನೆಚ್ಚಿನ ಕ್ರಿಕೆಟಿಗರಿಲ್ಲ ಎನ್ನುವ ಕಾರಣಕ್ಕೆ ಭಾರತದ ಟಿ20ಐ ಪಂದ್ಯ ನೋಡುತ್ತಿಲ್ಲವಂತೆ!

ತಮ್ಮ ನೆಚ್ಚಿನ ಆಟಗಾರರು ಇಲ್ಲದ ಕಾರಣ ನಾವು ಟಿ20ಐ ಕ್ರಿಕೆಟ್ ನೋಡುವುದಿಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದ ಪೋಸ್ಟ್​ಗಳು ಈ ಹಿಂದೆ ವೈರಲ್ ಆಗಿದ್ದವು.

ವಿಶ್ವಕಪ್ ಬಳಿಕ ಭಾರತದ ಟಿ20 ಪಂದ್ಯಗಳ ವೀಕ್ಷಣೆಯ ಅಧಿಕೃತ ಅಂಕಿ-ಅಂಶಗಳು ಬಿಡುಗಡೆಯಾಗದಿದ್ದರೂ, ಕ್ರಿಕೆಟ್ ನೋಡುಗರ ಸಂಖ್ಯೆ ಕ್ಷೀಣಿಸಿದೆ ಎಂದು ವರದಿಗಳು ಆಗಿದ್ದವು.

ಭಾರತದ ಟಿ20 ಪಂದ್ಯಗಳಿಗೆ ಮೈದಾನದಲ್ಲಿ ಪ್ರೇಕ್ಷಕರು ತುಂಬಿ ತುಳುಕುತ್ತಿದ್ದಾರೆ. ಆದರೆ, ಟಿವಿಗಳಲ್ಲಿ ನೋಡುಗರ ಸಂಖ್ಯೆ ಕುಸಿದಿದೆ ಎಂಬುದು ಆಘಾತಕಾರಿ ಅಂಶವಾಗಿದೆ.

13ನೇ ವೆಡ್ಡಿಂಗ್‌ ಆ್ಯನಿವರ್ಸರಿ ಆಚರಿಸಿಕೊಂಡ ದುಲ್ಕರ್ ಸಲ್ಮಾನ್‌