ಆರ್‌ಆರ್‌ vs ಆರ್‌ಸಿಬಿ ಮುಖಾಮುಖಿ ದಾಖಲೆ; ಯಾರು ಬಲಿಷ್ಠ?

By Jayaraj
May 21, 2024

Hindustan Times
Kannada

ಐಪಿಎಲ್‌ 2024ರ ಎಲಿಮನೇಟರ್‌ ಪಂದ್ಯದಲ್ಲಿ ಆರ್‌ಆರ್‌ ಮತ್ತು ಆರ್‌ಸಿಬಿ ತಂಡಗಳು ಮುಖಾಮುಖಿಯಾಗುತ್ತಿವೆ.

ಈ ಎರಡು ತಂಡಗಳ ಮುಖಾಮುಖಿ ದಾಖಲೆ ನೋಡೋಣ. 

2008ರಿಂದ ಆರ್‌ಸಿಬಿ ಹಾಗೂ ಆರ್‌ಆರ್‌ 31 ಪಂದ್ಯಗಳಲ್ಲಿ ಎದುರಾಗಿವೆ.

ಇದರಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಅತ್ತ ರಾಜಸ್ಥಾನ್‌ ರಾಯಲ್ಸ್ 13 ಬಾರಿ ಗೆದ್ದಿದೆ. ಉಳಿದ 3 ಪಂದ್ಯಗಳು ರದ್ದಾಗಿವೆ.

ಪ್ರಸಕ್ತ ಋತುವಿನ ಏಕೈಕ ಮುಖಾಮುಖಿಯಲ್ಲಿ ರಾಯಲ್ಸ್ ಭರ್ಜರಿ ಜಯ ಸಾಧಿಸಿತ್ತು.

ಈವರೆಗೆ ಪ್ಲೇಆಫ್‌ ಹಂತದ ಎರಡು ಮುಖಾಮುಖಿಯಲ್ಲೂ ಉಭಯ ತಂಡಗಳು 1-1ರಿಂದ ಸಮಬಲ ಸಾಧಿಸಿವೆ.

ಉಭಯ ತಂಡಗಳ ಕೊನೆಯ 6 ಮುಖಾಮುಖಿಯು 3-3ರಲ್ಲಿ ಸಮಬಲಗೊಂಡಿದೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ತಂಡಗಳು ಈವರೆಗೆ 2 ಬಾರಿ ಮುಖಾಮುಖಿಯಾಗಿವೆ. ಇಲ್ಲೂ ತಲಾ ಒಂದು ಪಂದ್ಯಗಳನ್ನು ಎರಡೂ ತಂಡಗಳು ಗೆದ್ದಿವೆ. 

ಹಾವು ಸಾಕಿ ಕೋಟ್ಯಂತರ ರೂಪಾಯಿ ಸಂಪಾದಿಸುವ ಊರು ಇದು