ರೋಹಿತ್ ಮಾತ್ರವಲ್ಲ; ಈ ಕ್ರಿಕೆಟಿಗರಿಗೂ ಇಬ್ಬರು ಮಕ್ಕಳಿದ್ದಾರೆ

By Jayaraj
Nov 17, 2024

Hindustan Times
Kannada

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಎರಡನೇ ಮಗುವಿಗೆ ತಂದೆಯಾಗಿದ್ದಾರೆ. ಪತ್ನಿ ರಿತಿಕಾ, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ರೋಹಿತ್ 2018ರಲ್ಲಿ ತಂದೆಯಾದರು. ಆಗ ರಿತಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ರೋಹಿತ್ ಮಾತ್ರವಲ್ಲದೆ, ಭಾರತ ತಂಡದ ಕೆಲ ಕ್ರಿಕೆಟಿಗರೂ ಇಬ್ಬರು ಮಕ್ಕಳ ತಂದೆಯಾಗಿದ್ದಾರೆ.

ವಿರಾಟ್ ಕೊಹ್ಲಿಗೂ ಇಬ್ಬರು ಮಕ್ಕಳಿದ್ದಾರೆ. ಕೊಹ್ಲಿ ಪತ್ನಿ ಅನುಷ್ಕಾ  2021ರ ಜನವರಿ 11ರಂದು ಮೊದಲ ಮಗುವಿಗೆ ಜನ್ಮ ನೀಡಿದರು.

ಅನುಷ್ಕಾ 2024ರ ಫೆಬ್ರವರಿಯಲ್ಲಿ ಮಗನಿಗೆ ಜನ್ಮ ನೀಡಿದರು. ಕೊಹ್ಲಿ ಮಕ್ಕಳ ಹೆಸರು ವಮಿಕಾ ಮತ್ತು ಅಕಾಯ್.

ಟೀಮ್‌ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಇಬ್ಬರು ಹೆಣ್ಣು ಮಕ್ಕಳ ತಂದೆ. ಅವರೇ ಆದ್ಯ ಮತ್ತು ಅಖಿರಾ.

ಅಶ್ವಿನ್ ತಮ್ಮ ಬಾಲ್ಯದ ಗೆಳತಿ ಪ್ರೀತಿ ನಾರಾಯಣ್ ಅವರನ್ನು 2011ರಲ್ಲಿ ವಿವಾಹವಾದರು.

ಅಜಿಂಕ್ಯ ರಹಾನೆ ಅವರಿಗೂ ಇಬ್ಬರು ಮಕ್ಕಳು. ರಹಾನೆಗೆ ಒಬ್ಬ ಮಗಳು ಮತ್ತು ಮಗ ಇದ್ದಾರೆ.

ಕ್ರಿಕೆಟಿಗ ಸುರೇಶ್ ರೈನಾ ಕೂಡ ಇಬ್ಬರು ಮಕ್ಕಳ ತಂದೆ. ರೈನಾ ಅವರ ಮಕ್ಕಳ ಹೆಸರು ಗ್ರೇಸಿಯಾ ರೈನಾ ಮತ್ತು ರಿಯೊ ರೈನಾ.

ಕ್ರಿಕೆಟಿಗ ಯುವರಾಜ್ ಸಿಂಗ್ ಕೂಡಾ ಒಬ್ಬ ಮಗ ಮತ್ತು ಮಗಳ ತಂದೆ. ಮಗನ ಹೆಸರು ಓರಿಯನ್ ಕೀಚ್ ಸಿಂಗ್ ಮತ್ತು ಮಗಳ ಹೆಸರು ಔರಾ.

ಪುಷ್ಪ 2 ಡಿಸೆಂಬರ್‌ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ

Instagram/rashmika_mandanna