ಸಂಜು ಸ್ಯಾಮ್ಸನ್-ಚಾರುಲತಾ ಲವ್ ಸ್ಟೋರಿ
By Jayaraj
Nov 12, 2024
Hindustan Times
Kannada
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಭರ್ಜರಿ ಶತಕ ಸಿಡಿಸಿದ್ದರು.
ಟಿ20 ಕ್ರಿಕೆಟ್‌ನಲ್ಲಿ ಬ್ಯಾಕ್-ಟು-ಬ್ಯಾಕ್ ಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೇರಳದ ಹುಡುಗ ಸಂಜು ಸ್ಯಾಮ್ಸನ್ ಅವರ ವೃತ್ತಿಪರ ಜೀವನದ ಹೊರತಾಗಿ, ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿಯೋಣ.
ಸಂಜು ಸ್ಯಾಮ್ಸನ್‌ಗೆ ಮದುವೆಯಾಗಿದೆ. ಅವನ ಹೆಂಡತಿಯ ಹೆಸರು ಚಾರುಲತಾ. ಇಬ್ಬರೂ ಕಾಲೇಜು ಜೀವನದಿಂದ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ.
ಸಂಜು ಸ್ಯಾಮ್ಸನ್ ಮತ್ತು ಚಾರುಲತಾ ಇಬ್ಬರೂ ಕೇರಳದವರು. ಇಬ್ಬರೂ ತಿರುವನಂತಪುರಂನ ಇವಾನಿಯೋಸ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದಾರೆ.
ಇಬ್ಬರೂ ಸಹಪಾಠಿಗಳಾಗಿದ್ದರು. ಆದರೆ ಆರಂಭದಲ್ಲಿ ಇಬ್ಬರೂ ಮುಖಾಮುಖಿ ಮಾತನಾಡುತ್ತಿರಲಿಲ್ಲ.
ಸಂಜು ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ಅದನ್ನು ಚಾರುಲತಾ ಸ್ವೀಕರಿಸಿದ ನಂತರ ಇಬ್ಬರ ನಡುವೆ ಸಂಭಾಷಣೆ ಪ್ರಾರಂಭವಾಯಿತು.
ಚಾರುಲತಾ ಮತ್ತು ಸಂಜು ನಡುವೆ ಆತ್ಮೀಯತೆ ಬೆಳೆದು ಸ್ನೇಹಿತರಾದರು. ನಿಧಾನವಾಗಿ ಈ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತು.
ಸಂಜು ಮತ್ತು ಚಾರುಲತಾ ಐದು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಮದುವೆಯಾದರು. 2018ರ ಡಿಸೆಂಬರ್ 22ರಂದು ವಿವಾಹ ನಡೆಯಿತು.
ಪಿಂಕ್ ಬಾಲ್ ಟೆಸ್ಟ್ನಲ್ಲಿ ಟ್ರಾವಿಸ್ ಹೆಡ್ ವೇಗದ ಶತಕ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ