ನಿತೀಶ್ ಕುಮಾರ್ ರೆಡ್ಡಿ ಐಪಿಎಲ್ ಅಂಕಿ-ಅಂಶ, ಸಂಭಾವನೆ
By Jayaraj
Nov 22, 2024
Hindustan Times
Kannada
ಐಪಿಎಲ್‌ನಲ್ಲಿ ಅಬ್ಬರಿಸಿದ್ದ ಯುವ ಕ್ರಿಕೆಟಿಗ ನಿತೀಶ್ ಕುಮಾರ್ ರೆಡ್ಡಿ, ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ.
ಕಳೆದ ಐಪಿಎಲ್ ಆವೃತ್ತಿಯಲ್ಲಿ ಸನ್‌ರೈಸರ್ಸ್ ಪರ ಆಡಿದ್ದ ನಿತೀಶ್, ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅಬ್ಬರಿದ್ದರು.
ಐಪಿಎಲ್ 2023ರ ಆವೃತ್ತಿಯ ಉದಯೋನ್ಮುಖ ಆಟಗಾರ ಪ್ರಶಸ್ತಿ ಗೆದ್ದ ಆಟಗಾರ, ಭಾರತ ಟಿ20 ತಂಡಕ್ಕೆ ಆಯ್ಕೆಯಾದರು.
ಐಪಿಎಲ್‌ನಲ್ಲಿ ಇವರ ಅಂಕಿ-ಅಂಶ, ಸಂಬಳ ಸೇರಿದಂತೆ ವಿವಿಧ ಮಾಹಿತಿ ಹೀಗಿದೆ.
ಐಪಿಎಲ್‌ನಲ್ಲಿ, ನಿತೀಶ್ ಕುಮಾರ್ ರೆಡ್ಡಿ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡವು ಅವರ ಮೂಲ ಬೆಲೆ 20 ಲಕ್ಷಕ್ಕೆ ಖರೀದಿಸಿತು.
2023ರಲ್ಲಿ ಚೊಚ್ಚಲ ಐಪಿಎಲ್ ಪಂದ್ಯ ಆಡಿದ ನಿತೀಶ್ ಅವರನ್ನು 2024ರ ಆವೃತ್ತಿಗೂ ಎಸ್‌ಆರ್‌ಎಚ್ ತಂಡ ಉಳಿಸಿಕೊಂಡಿತು.
ಕಳೆದ ಆವೃತ್ತಿಯಲ್ಲಿ ನಿತೀಶ್ 303 ರನ್ ಗಳಿಸಿದ್ದರು. ಇದರಲ್ಲಿ 2 ಅರ್ಧಶತಕ ಸೇರಿತ್ತು. ಸ್ಟ್ರೈಕ್ ರೇಟ್ 142.92
ಇದೀಗ 2025ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ನಿತೀಶ್ ರೆಡ್ಡಿ ಅವರನ್ನು ಹೈದರಾಬಾದ್ ತಂಡ 6 ಕೋಟಿ ರೂ ಕೊಟ್ಟು ರಿಟೈನ್ ಮಾಡಿಕೊಂಡಿದೆ.
ಇತ್ತೀಚೆಗೆ ನಡೆದ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ ಮೂಲಕ ನಿತೀಶ ರೆಡ್ಡಿ ಭಾರತಕ್ಕೆ ಪದಾರ್ಪಣೆ ಮಾಡಿದರು
ತನಗಿಂತ 7 ವರ್ಷ ದೊಡ್ಡವಳನ್ನು ಪ್ರೀತಿಸುತ್ತಿದ್ದ ಶಿವಂ ದುಬೆ!
ಮುಂದಿನ ಸ್ಟೋರಿ ಕ್ಲಿಕ್ ಮಾಡಿ