ಎಂಎಸ್ ಧೋನಿ ಈ ಉದ್ದೇಶಕ್ಕೆ ಮಾತ್ರ ಫೋನ್ ಬಳಸುತ್ತಾರೆ

By Jayaraj
Oct 16, 2024

Hindustan Times
Kannada

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಸದ್ಯ ನಿವೃತ್ತಿ ಬಳಿಕ ವೈಯಕ್ತಿಕ ಜೀವನವನ್ನು ಎಂಜಾಯ್‌ ಮಾಡುತ್ತಿದ್ದಾರೆ.

ಧೋನಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ ಇರುವುದಿಲ್ಲ. ಹೀಗಾಗಿ ಮೊಬೈಲ್‌ ಫೋನ್‌ ಹೆಚ್ಚಾಗಿ ಬಳಸಲ್ಲ.

ಧೋನಿಗೆ ಸಹ ಆಟಗಾರರು ಮತ್ತು ಆತ್ಮೀಯ ಸ್ನೇಹಿತರು ಕರೆ ಮಾಡಿದರೂ ಹೆಚ್ಚಿನ ಸಂದರ್ಭದಲ್ಲಿ ಉತ್ತರಿಸುವುದಿಲ್ಲ ಎಂದು ಹಲವರು ಹೇಳಿಕೊಂಡಿದ್ದಾರೆ.

ಯಾಕೆಂದರೆ ಧೋನಿ ಫೋನ್ ತುಂಬಾ ವಿರಳವಾಗಿ ಬಳಸುತ್ತಾರೆ.

ಸಂದರ್ಶನದಲ್ಲಿ ಮಾತನಾಡಿದ್ದ ಮಾಹಿ, ತಾವು ಫೋನ್ ಅನ್ನು ಒಂದು ಕೆಲಸಕ್ಕೆ ಮಾತ್ರ ಬಳಸುತ್ತಾರೆ ಎಂದು ಹೇಳಿದ್ದರು.

ಫೋನ್ ಅನ್ನು ತಾನು ಒಂದೇ ಉದ್ದೇಶಕ್ಕೆ ಬಳಸುತ್ತೇನೆ. ಅದು ರಾತ್ರಿ ವೇಳೆ ಅಲಾರಾಂ ಸೆಟ್‌ ಮಾಡಲು ಎಂದು ಅವರು ಹೇಳಿದ್ದಾರೆ.

ಬೆಳಗ್ಗೆ ಸಮಯಕ್ಕೆ ಸರಿಯಾಗಿ ಎದ್ದೇಳಲು ಫೋನ್‌ನಲ್ಲಿ ಅಲಾರಂ ಇಡುತ್ತೇನೆ ಎಂದು ಧೋನಿ ಹೇಳುತ್ತಾರೆ.

ಇದೇ ವೇಳೆ ಯುವಕರಿಗೆ ಸಲಹೆ ನೀಡಿದ ಮಾಹಿ, ಮೊಬೈಲ್‌ನಿಂದ ಆದಷ್ಟು ದೂರವಿರಿ ಎಂದಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದರೆ ಕಾಮೆಂಟ್ ನೋಡಬೇಡಿ ಎನ್ನುತ್ತಾರೆ.

Instagram

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ