ಶೀಘ್ರದಲ್ಲೇ ತಂದೆಯಾಲಿದ್ದಾರೆ ಈ ಮೂವರು ಸ್ಟಾರ್ ಕ್ರಿಕೆಟಿಗರು
By Jayaraj
Nov 19, 2024
Hindustan Times
Kannada
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಎರಡನೇ ಬಾರಿಗೆ ತಂದೆಯಾದರು. ಅವರ ಪತ್ನಿ ರಿತಿಕಾ ಗಂಡು ಮಗುವಿಗೆ ಜನ್ಮ ನೀಡಿದರು.
ರೋಹಿತ್ ನಂತರ ಇದೀಗ ಇಬ್ಬರು ಭಾರತೀಯ ಹಾಗೂ ಆಸ್ಟ್ರೇಲಿಯಾದ ಒಬ್ಬ ಕ್ರಿಕೆಟಿಗ ಕೂಡ ಶೀಘ್ರದಲ್ಲೇ ತಂದೆಯಾಗಲಿದ್ದಾರೆ.
ಟೀಮ್ ಇಂಡಿಯಾ ವಿಕೆಟ್ ಕೀಪರ್, ಕನ್ನಡಿಗ ಕೆಎಲ್ ರಾಹುಲ್ ತಂದೆಯಾಗಲಿದ್ದಾರೆ. ಈ ಬಗ್ಗೆ ಪತ್ನಿ ಅಥಿಯಾ ಮತ್ತು ರಾಹುಲ್ ಖುದ್ದು ಮಾಹಿತಿ ನೀಡಿದ್ದಾರೆ.
2025ರಲ್ಲಿ ಪತ್ನಿ ಅಥಿಯಾ ತಮ್ಮ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ ರಾಹುಲ್ ಸಾಮಾಜಿಕ ಮಾಧ್ಯಮದ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಭಾರತ ತಂಡದ ಸ್ಟಾರ್ ಆಲ್ ರೌಂಡರ್ ಅಕ್ಷರ್ ಪಟೇಲ್ ಪತ್ನಿ ಮೇಹಾ ಕೂಡ ಇದೇ ಮೊದಲ ಬಾರಿಗೆ ತಾಯಿಯಾಗಲಿದ್ದಾರೆ.
ಸದ್ಯದಲ್ಲೇ ಮನೆಯಲ್ಲಿ ನಗು ಅರಳಲಿದೆ ಎಂದು ಈ ಜೋಡಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಈ ಪಟ್ಟಿಯಲ್ಲಿರುವ ಮೂರನೇ ಹೆಸರು ಆಸ್ಟ್ರೇಲಿಯಾದ ಕ್ರಿಕೆಟಿಗ ಪ್ಯಾಟ್ ಕಮಿನ್ಸ್. ಪ್ಯಾಟ್ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಿದ್ದಾರೆ.
ಪ್ಯಾಟ್ ಕಮಿನ್ಸ್ ಅವರ ಪತ್ನಿ ಬೆಕಿ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.
ಪ್ಯಾಟ್ ಕಮ್ಮಿನ್ಸ್ ಪತ್ನಿ ಬೇಬಿ ಬಂಪ್ ಚಿತ್ರ ಹಂಚಿಕೊಂಡಿದ್ದಾರೆ. ಕಮಿನ್ಸ್ ಮತ್ತು ಬೆಕಿ ಜೋಡಿಗೆ ಈಗಾಗಲೇ ಒಬ್ಬ ಮಗ ಇದ್ದಾನೆ.
ಪಿಂಕ್-ಬಾಲ್ ಟೆಸ್ಟ್‌ನಲ್ಲಿ ಭಾರತದ ದಾಖಲೆ ಹೀಗಿದೆ
AFP
ಮುಂದಿನ ಸ್ಟೋರಿ ಕ್ಲಿಕ್ ಮಾಡಿ