ಐಪಿಎಲ್‌ನ ಈ ದಾಖಲೆಗಳನ್ನು ಮುರಿಯುವುದು ಕಷ್ಟ ಕಷ್ಟ!

By Jayaraj
Nov 25, 2024

Hindustan Times
Kannada

ಐಪಿಎಲ್ ವಿಶ್ವದ ಅತಿದೊಡ್ಡ ಟಿ20 ಲೀಗ್ ಆಗಿದೆ. 2008ರಲ್ಲಿ ಆರಂಭವಾದ ಟೂರ್ನಿ ಈವರೆಗೆ 17 ಸೀಸನ್‌ ಪೂರೈಸಿದೆ.

ಐಪಿಎಲ್ ಇತಿಹಾಸದಲ್ಲಿ ಕೆಲವು ದಾಖಲೆಗಳು ಮುರಿಯಲು ಅಸಾಧ್ಯವೆನಿಸುತ್ತದೆ. ಆ ದಾಖಲೆಗಳು ಯಾವುವು ಎಂದು ತಿಳಿಯೋಣ.

ಚೆನ್ನೈ ಸೂಪರ್ ಕಿಂಗ್ಸ್ (CSK) ಒಟ್ಟು 12 ಬಾರಿ ಪ್ಲೇ ಆಫ್‌ಗೆ ಪ್ರವೇಶಿಸಿದೆ. ಇದು ದಾಖಲೆ.

2020ರಲ್ಲಿ, ಮೊಹಮ್ಮದ್ ಸಿರಾಜ್ ಆರ್‌ಸಿಬಿ ಪರ ಆಡುವಾಗ ಕೆಕೆಆರ್ ವಿರುದ್ಧ 2 ಓವರ್ ಮೇಡನ್ ಬೌಲ್ ಮಾಡಿದರು. ಅಲ್ಲದೆ 3 ವಿಕೆಟ್‌ ಪಡೆದಿದ್ದರು.

ಕ್ರಿಸ್ ಗೇಲ್ ಐಪಿಎಲ್‌ನಲ್ಲಿ ಅತಿ ವೇಗದ ಶತಕ ದಾಖಲಿಸಿದ್ದಾರೆ. ಗೇಲ್ 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ 30 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು.

ಒಂದು ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ವಿರಾಟ್ 2016ರಲ್ಲಿ 16 ಪಂದ್ಯಗಳಲ್ಲಿ ಒಟ್ಟು 973 ರನ್ ಸಿಡಿಸಿದ್ದರು.

ಕೆಕೆಆರ್ ಅತಿ ಹೆಚ್ಚು ಸತತ ಗೆಲುವುಗಳ ದಾಖಲೆಯನ್ನು ಹೊಂದಿದೆ (ಒಟ್ಟು 10). ತಂಡವು 2014ರ ಋತುವಿನಲ್ಲಿ ಸತತ 9 ಪಂದ್ಯ, ಮತ್ತು 2015ರ ಮೊದಲ ಪಂದ್ಯದಲ್ಲಿ  ಜಯಗಳಿಸಿತ್ತು.

ನಾಯಕನಾಗಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆ ಎಂಎಸ್ ಧೋನಿ ಹೆಸರಿನಲ್ಲಿದೆ. ನಾಯಕನಾಗಿ‌ ಅವರು ಒಟ್ಟು 226 ಪಂದ್ಯಗಳನ್ನು ಆಡಿದ್ದಾರೆ.

ಕ್ರಿಸ್ ಗೇಲ್ ಮತ್ತು ರವೀಂದ್ರ ಜಡೇಜಾ ಒಂದೇ ಓವರ್‌ನಲ್ಲಿ 37 ರನ್ ಗಳಿಸಿದ್ದಾರೆ. ಜಡೇಜಾ 2021ರಲ್ಲಿ ಈ ಸಾಧನೆ ಮಾಡಿದ್ದರೆ, ಗೇಲ್ 2011ರಲ್ಲಿ ಈ ಸಾಧನೆ ಮಾಡಿದ್ದರು.

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ