ಕೊಹ್ಲಿ, ರೋಹಿತ್, ಜಡೇಜಾ, ಅಶ್ವಿನ್ ಪದಾರ್ಪಣೆ ದಿನ
By Jayaraj
Nov 05, 2024
Hindustan Times
Kannada
ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರರಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಪ್ರಮುಖರು.
ಈ ನಾಲ್ವರು ದಿಗ್ಗಜರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ಯಾವಾಗ ಎಂಬುದನ್ನು ತಿಳಿಯೋಣ
ವಿರಾಟ್ ಕೊಹ್ಲಿ ಏಕದಿನ ಸ್ವರೂಪಕ್ಕೆ ಮೊದಲು ಪದಾರ್ಪಣೆ ಮಾಡಿದರು. ಶ್ರೀಲಂಕಾ ವಿರುದ್ಧ 2008ರ ಆಗಸ್ಟ್ 18ರಂದು ಮೊದಲ ಪಂದ್ಯವಾಡಿದರು.
ಕೊಹ್ಲಿಗೆ ಈಗ 36 ವರ್ಷ ವಯಸ್ಸು. ಇಲ್ಲಿಯವರೆಗೆ ಒಟ್ಟು 118 ಟೆಸ್ಟ್, 295 ಏಕದಿನ ಹಾಗೂ 125 ಟಿ20 ಅಂತಾರಾಷ್ಟ್ರೀಯ ಪಂದ್ಯ ಆಡಿದ್ದಾರೆ.
ರೋಹಿತ್ ಶರ್ಮಾ ಅವರು 2007ರ ಜೂನ್ 23ರಂದು ಐರ್ಲೆಂಡ್ ವಿರುದ್ಧ ಏಕದಿನ ಪಂದ್ಯದ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು.
ರೋಹಿತ್ ವಯಸ್ಸು ಈಗ 37 ವರ್ಷ. ಇಲ್ಲಿಯವರೆಗೆ ಅವರು ಒಟ್ಟು 64 ಟೆಸ್ಟ್, 265 ಏಕದಿನ ಮತ್ತು 159 ಟಿ20 ಪಂದ್ಯ ಆಡಿದ್ದಾರೆ.
ಆರ್ ಅಶ್ವಿನ್ ಕೂಡಾ ಏಕದಿನ ಮಾದರಿ ಮೂಲಕ ಪಾದಾರ್ಪಣೆ ಮಾಡಿದರು. 2010ರ ಜೂನ್ 5ರಂದು ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಕಾಲಿಟ್ಟರು.
ಅಶ್ವಿನ್ ಅವರಿಗೆ 38 ವರ್ಷ ವಯಸ್ಸಾಗಿದ್ದು, ಇಲ್ಲಿಯವರೆಗೆ 105 ಟೆಸ್ಟ್, 116 ಏಕದಿನ ಹಾಗೂ 65 ಟಿ20 ಪಂದ್ಯ ಆಡಿದ್ದಾರೆ.
ರವೀಂದ್ರ ಜಡೇಜಾ ಶ್ರೀಲಂಕಾ ವಿರುದ್ಧ 2009ರ ಫೆಬ್ರವರಿ 8ರಂದು ಏಕದಿನ ಪಾದಾರ್ಪಣೆ ಮಾಡಿದರು.
ಜಡೇಜಾಗೆ ಈಗ 35 ವರ್ಷ. ಇವರು 77 ಟೆಸ್ಟ್, 197 ಏಕದಿನ ಹಾಗೂ 74 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ