ಎಂಎಸ್ ಧೋನಿ ನಿವೃತ್ತರಾಗಿದ್ದು ಯಾವಾಗ?

By Jayaraj
Nov 13, 2024

Hindustan Times
Kannada

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಟೆಸ್ಟ್, ಏಕದಿನ ಹಾಗೂ ಟಿ20 ಸ್ವರೂಪಲ್ಲಿ ಈ ಹಿಂದೆಯೇ ನಿವೃತ್ತಿ ಘೋಷಿಸಿದ್ದಾರೆ.

ಆದರೆ, ಐಪಿಎಲ್‌ನಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ. ಮಾಹಿ ವಯಸ್ಸು ಈಗ 43 ವರ್ಷ.

ಟೆಸ್ಟ್, ಏಕದಿನ ಮತ್ತು ಟಿ20 ಸ್ವರೂಪಗಳಿಂದ ಧೋನಿ ಯಾವಾಗ ನಿವೃತ್ತರಾದರು ಎಂಬುದನ್ನು ತಿಳಿಯೋಣ.

ಎಂಎಸ್ ಧೋನಿ 2014ರ ಡಿಸೆಂಬರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆದರು.

2020ರ ಆಗಸ್ಟ್ 15ರಂದು  ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು.

ಕೊನೆಯ ಬಾರಿಗೆ ಮಾಹಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದು 2019ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ.

ಧೋನಿ ಒಟ್ಟು 90 ಟೆಸ್ಟ್, 350 ಏಕದಿನ ಮತ್ತು 98 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಸೌರವ್ ಗಂಗೂಲಿ ನಾಯಕತ್ವದಲ್ಲಿ ಧೋನಿ ಪದಾರ್ಪಣೆ ಮಾಡಿದರು. ತಮ್ಮ ಮೊದಲ ಪಂದ್ಯವನ್ನು 2004ರ ಡಿಸೆಂಬರ್ 23ರಂದು ಬಾಂಗ್ಲಾದೇಶ ವಿರುದ್ಧ ಆಡಿದರು.

ಮಾಜಿ ನಾಯಕ ಧೋನಿ 2 ವಿಶ್ವಕಪ್ ಗೆದ್ದಿದ್ದಾರೆ ಮತ್ತು ಒಮ್ಮೆ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದಾರೆ.

ಪಿಂಕ್ ಬಾಲ್ ಟೆಸ್ಟ್​ನಲ್ಲಿ ಟ್ರಾವಿಸ್ ಹೆಡ್ ವೇಗದ ಶತಕ