ಒಬ್ಬ ವ್ಯಕ್ತಿ ಮದ್ಯಪಾನ ಮಾಡಿದ ನಂತರ ಸತ್ಯವನ್ನು ಮಾಡಲು ಪ್ರಾರಂಭಿಸುತ್ತಾನೆ ಎಂದು ಅನೇಕ ಜನರಿಂದ ಕೇಳಿರುತ್ತೀರಿ
ಅಷ್ಟೇ ಅಲ್ಲ, ಲ್ಯಾಟಿನ್ ಭಾಷೆಯಲ್ಲಿ ಇನ್ ವಿನೋ ವೆರಿಟಾಸ್ ಅಂದರೆ ವೈನ್‌ನಲ್ಲಿ ಸತ್ಯ ಅಡಗಿದೆ ಎಂಬ ಮಾತಿದೆ
ಅಮಲೇರಿದ ನಂತರ ಒಬ್ಬ ವ್ಯಕ್ತಿಯು ಸಾಮಾನ್ಯವಾಗಿ ಅಂತಹ ವಿಷಯಗಳನ್ನು ಹೇಳಲು ಪ್ರಾರಂಭಿಸುತ್ತಾನೆ. ಪ್ರಜ್ಞೆಯಲ್ಲಿದ್ದಾಗ ಎಚ್ಚರಿಕೆಯಿಂದ ಮಾತನಾಡುತ್ತಾನೆ
ಒಬ್ಬ ವ್ಯಕ್ತಿ ಮದ್ಯಪಾನ ಮಾಡಿದ ನಂತರ ಸತ್ಯವನ್ನುು ಮಾತನಾಡಲು ಪ್ರಾರಂಭಿಸುತ್ತಾನೆ ಎಂಬುದು ನಿಜವೇ? ಅದರ ಬಗ್ಗೆ ತಿಳಿಯಿರಿ
ತಜ್ಞರ ಪ್ರಕಾರ, ಮದ್ಯಪಾನ ನಮ್ಮ ಆಲೋಚನೆ ಮತ್ತು ಭಾವನನೆಗಳ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಸಂದರ್ಭದಗಳಲ್ಲಿ ಜನರು ಮುಕ್ತವಾಗಿ ಮಾತನಾಡುತ್ತಾರೆ
ಮದ್ಯಪಾನ ನಿಗ್ರಹಿಸಿದ ಭಾವನೆಗಳನ್ನು ಹೊರಹಾಕುತ್ತದೆ. ಆದರೆ ಈ ಭಾವನೆಗಳು ಯಾವಾಗಲೂ ಸರಿಯಾಗಿರುವುದಿಲ್ಲ
ಆಲ್ಕೋಹಾಲ್ ದುರುಪಯೋಗ ಮತ್ತು ಆಲ್ಕೋಹಾಲಿಸಂ ಎಪಿಡೆಮಿಯಾಲಜಿಯ ರಾಷ್ಟ್ರೀಯ ಸಂಸ್ಥೆಯ ಮುಖ್ಯಸ್ಥ ಆರನ್ ವೈಟ್ ಪ್ರಕಾರ, ಮದ್ಯದ ಅಮಲಿನಲ್ಲಿರುವ ವ್ಯಕ್ತಿ ತನ್ನ ಮನಸ್ಸಿನಲ್ಲಿರುವುದನ್ನು ಮಾತ್ರ ಮಾತನಾಡುತ್ತಾನೆ
ಕೆಲವು ಸಂದರ್ಭದಲ್ಲಿ ಮಾತ್ರ ವ್ಯಕ್ತಿ ಮದ್ಯಪಾನ ಮಾಡಿದ ನಂತರ ಏನು ಹೇಳುತ್ತಿದ್ದರೂ ಅದು ನಿಜವಾಗಿರುತ್ತೆ. ಆದರೆ ಆತನಿಗೆ ಪ್ರಜ್ಞೆ ಇರುವುದಿಲ್ಲ
ಒಬ್ಬ ವ್ಯಕ್ತಿಯು ಮದ್ಯಪಾನ ಮಾಡಿದ ನಂತರ ಸತ್ಯವನ್ನು ಮಾತ್ರ ಮಾತನಾಡುತ್ತಾನೆ ಎಂಬುದು ಕೇವಲ ಪುರಾಣ. ನಶೆಯಲ್ಲಿ ಹೇಳಿದ ಸಂಗತಿಗಳನ್ನು ಸತ್ಯವೆಂದು ಒಪ್ಪಿಕೊಳ್ಳುವುದು ತಪ್ಪು ತಿಳುವಳಿಕೆಯಾಗಿದೆ
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ. ಇದರಿಂದ ಪಿತ್ತಜನಕಾಂಗದ ಕಾಯಿಲೆ, ಹೃದ್ರೋಗ, ಕ್ಯಾನ್ಸರ್ ಹೀಗೆ ಹಲವಾರು ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ