ಸರ್ಕಾರ ಉಚಿತವಾಗಿ ನೀಡುತ್ತಿರುವ 5 ಕೌಶಲ ಅಭಿವೃದ್ಧಿ ಕೋರ್ಸ್‌ಗಳು
By Reshma Oct 17, 2024
Hindustan Times Kannada
ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್ ವೇದಿಕೆಯು ಕೃಷಿ, ಹಣಕಾಸು, ಸೌಂದರ್ಯ, ಆಟೊಮೋಟಿವ್, ಬ್ಯಾಂಕಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಲವು ಕೌಶಲ ಅಭಿವೃದ್ಧಿ ಕೋರ್ಸ್‌ಗಳನ್ನು ಹೊಂದಿದೆ. ಇದರಲ್ಲಿ ಸರ್ಕಾರ ನೀಡುವ 5 ಉಚಿತ ಸ್ಕಿಲ್ ಡೆವಲಪ್‌ಮೆಂಟ್ ಕೋರ್ಸ್‌ಗಳ ವಿವರ ಇಲ್ಲಿದೆ
ಕೃಷಿ–ಕೀಸಾನ್ ಡ್ರೋನ್ ಆಪರೇಟರ್: ಇವರು ಕೃಷಿ ಹಾಗೂ ಸಂಬಂಧಿತ ಚಟುವಟಿಕೆಗಳಿಗೆ ಸಂಬಂಧಿಸಿದ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ದಿಷ್ಟ ಸೇವನೆಯ ಸಲ್ಲಿಸುವ ಜವಾಬ್ದಾರಿ ಹೊಂದಿರುತ್ತಾರೆ. ಈ ಕೋರ್ಸ್ ಅನ್ನು ಅಗ್ರಿಕಲ್ಚರ್ ಸ್ಕಿಲ್ ಕೌನ್ಸಿಲ್ ಫೋಫ್ಟ್ರಿಶನ್ಲ್ಯಾಶ್ ನೀಡುತ್ತದೆ
ಬ್ಯಾಂಕಿಂಗ್ ಮತ್ತು ಫೈನಾನ್ಸ್–ಬ್ರಾಂಚ್ ಬ್ಯಾಂಕಿಂಗ್ ಎಕ್ಸಿಕ್ಯೂಟಿವ್: ಈ ಕೋರ್ಸ್ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಮತ್ತು ಹಣಕಾಸು ಘಟಕಗಳ ವಿವಿಧ ಸ್ತರಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮ ಈ ತರಬೇತಿ ನೀಡುತ್ತದೆ
ಆಟೊಮೆಟಿವ್: ವೆಲ್ಡಿಂಗ್ ಟೆಕ್ಸ್‌ನಿಷಿಯನ್: ನ್ಯಾಷನಲ್ ಸಿಲ್ಕ್ ಡೆವಲಪ್‌ಮೆಂಟ್ ಕಾರ್ಪೋರೇಷನ್ ಇದರ ಟ್ರೈನಿಂಗ್ ಪಾರ್ಟನರ್. ಆಟೊಮೇಟಿವ್ ಮ್ಯಾನುಫಾಕ್ಟರಿಂಗ್‌ನಲ್ಲಿ ನಡೆಯುವ ಎಲ್ಲಾ ರೋಬೊಟಿಕಲ್ ಹಾಗೂ ಮ್ಯಾನ್ಯುವಲ್ ವೆಲ್ಡಿಂಗ್ ಕಾರ್ಯಾಚರಣೆಗಳಲ್ಲಿ ಪ್ರಾಥಮಿಕ ತೊಡಗಿಕೊಳ್ಳುವುದಾಗಿದೆ
ಹೆಲ್ತ್‌ಕೇರ್: ಪ್ರಧಾನಮಂತ್ರಿ ಆರೋಗ್ಯ ಮಿತ್ರ: ಆಯುಷ್ಮಾನ್ ಭಾರತ್– ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಮತ್ತು ಪರಿಶೀಲಿಸಲು ಫಲಾನುಭವಿಗಳ ಗುರುತಿನ ವ್ಯವಸ್ಥೆಯನ್ನು ನಿರ್ವಹಿಸುವ ಕೆಲಸ ಮಾಡುತ್ತಾರೆ
ಎಲೆಕ್ಟ್ರಾನಿಕ್ಸ್– ಫೀಲ್ಡ್ ಟೆಕ್ನಿಷಿಯನ್: ಈ ಕೋರ್ಸ್ ಅನ್ನು ನ್ಯಾಷನಲ್ ಸ್ಕಿಲ್ ಡೆವಲೆಪ್‌ಮೆಂಟ್ ಕಾರ್ಪೋರೇಷನ್ ನೀಡುತ್ತದೆ. ಡೆಸ್ಕ್‌ಟಾಪ್ ತಂತ್ರಜ್ಞ, ಕಂಪ್ಯೂಟಿಂಗ್ ಮತ್ತು ಪೆರಿಫೆರಲ್ಸ್ ಕಂಪ್ಯೂಟರ್ ಅನ್ನು ಸ್ಥಾಪಿಸಲು, ಸರಿಪಡಿಸಲು, ನಿರ್ವಹಿಸಲು ಗ್ರಾಹಕರು ಇರುವ ಜಾಗಕ್ಕೆ ಭೇಟಿ ನೀಡುವುದು