ಉದ್ಯೋಗ ಸಂದರ್ಶನದಲ್ಲಿ ಆ್ಯಪಲ್ ಕಂಪನಿ ನಿಮ್ಮಿಂದ ನಿರೀಕ್ಷಿಸುವ 5 ವಿಷಯಗಳು

Photo credit: Unsplash

By Praveen Chandra B
Dec 23, 2024

Hindustan Times
Kannada

ನೀವು ಆ್ಯಪಲ್ ಕಂಪನಿಯ ಉದ್ಯೋಗ ಸಂದರ್ಶನಕ್ಕೆ ಹೋಗುವಿರಿ ಎಂದಿರಲಿ. ಆ ಸಮಯದಲ್ಲಿ ಕಂಪನಿಯು ತಮ್ಮ ಭವಿಷ್ಯದ ಉದ್ಯೋಗಿಯಿಂದ ಏನು ಬಯಸುತ್ತದೆ ಎಂದು ತಿಳಿಯೋಣ.

Photo Credit: Pexels

ಆ್ಯಪಲ್ ಕಂಪನಿಯ ಸಂದರ್ಶನ ತುಸು ಭಿನ್ನವಾಗಿರುತ್ತದೆ. ಉದ್ಯೋಗಿಗಳಿಂದ ಕಂಪನಿಯು ಪ್ರಾಮಾಣಿಕ ಉತ್ತರ ಬಯಸುತ್ತದೆ. ಈ ಮುಂದಿನ 5 ವಿಷಯಗಳನ್ನು ಗಮನಿಸಿ.

Photo Credit: Pexels

ಬೇಗ ಬನ್ನಿ: ಉದ್ಯೋಗ ಸಂದರ್ಶನಕ್ಕೆ ಹದಿನೈದು ನಿಮಿಷ ಮುಂಚಿತವಾಗಿ ಬರುವುದು ಒಳ್ಳೆಯದು ಎನ್ನುವುದು ಆ್ಯಪಲ್ ಕಂಪನಿಯ ಅಭಿಪ್ರಾಯ.

Photo Credit: Pexels

ನಿಮ್ಮತನ ಬಿಡಬೇಡಿ: ನೀವು ನಟಿಸಬೇಡಿ. ನೈಜವಾಗಿ ಹೇಗೆ ಇರುವಿರೋ, ಕೆಲಸ ಮಾಡುವ ಸಮಯದಲ್ಲಿ ಹೇಗೆ ಇರುವಿರೋ ಅಷ್ಟು ನ್ಯಾಚುರಲ್‌ ಆಗಿ ಧೈರ್ಯವಾಗಿ ಸಂದರ್ಶನ ಎದುರಿಸಿ.

Photo Credit: Pexels

ವರ್ಕ್‌ ಹಿಸ್ಟರಿ: ನಿಮ್ಮ ಹಿಂದಿನ ಕಂಪನಿಯಲ್ಲಿನ ಕಾರ್ಯಕ್ಷಮತೆಗೆ ಸಂಬಂಧಪಟ್ಟ ಪ್ರಶ್ನೆಗಳು ಇರುತ್ತವೆ. ಆ್ಯಪಲ್ ಕಂಪನಿ ಸಂದರ್ಶನಕ್ಕೆ ಮೊದಲೇ ನಿಮ್ಮ ಕೆಲಸದ ಇತಿಹಾಸವನ್ನು ಸಂಗ್ರಹಿಸಿರುತ್ತದೆ.

Photo Credit: Pixabay

ಸಂದರ್ಶನದ ಕೊನೆಯಲ್ಲಿ ನಿಮ್ಮ ಹುದ್ದೆಯ ಬಗ್ಗೆ ಮತ್ತು ಆ ಹುದ್ದೆಯಲ್ಲಿ ಯಶಸ್ಸು ಹೇಗಿರುತ್ತದೆ ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ನಿಮ್ಮ ಸ್ವಂತ ಪ್ರಶ್ನೆಗಳನ್ನು ಕೇಳಿರಿ.

Photo Credit: Pixabay

ಸೂಕ್ಷ್ಮ ಮಾಹಿತಿ ಬೇಡ: ಆ್ಯಪಲ್ ಕಂಪನಿಯ ಸಂದರ್ಶನಕರು ನಿಮ್ಮ ಅನುಭವ ಮತ್ತು ಕೌಶಲಗಳ ಕುರಿತು ಮಾತ್ರ ಆಸಕ್ತಿ ಹೊಂದಿರುತ್ತಾರೆ. ಇತರೆ ಜನರು  ಅಥವಾ ಬೇರೆ ಕಂಪನಿಗಳ ಸೂಕ್ಷ್ಮ, ಗೌಪ್ಯ ಮಾಹಿತಿ ಕುರಿತು ಆಸಕ್ತಿ ಹೊಂದಿರುವುದಿಲ್ಲ.

Photo Credit: Pexels

ಉದ್ಯೋಗ ಸಂದರ್ಶನದ ಬಳಿಕ ಮುಂದೆ ಯಾವ ಪ್ರೊಸೆಸ್‌ ಇರುತ್ತದೆ ಎಂದು ಮಾಹಿತಿ ನೀಡಲಾಗುತ್ತದೆ. ಅವರು ಮಾಹಿತಿ ನೀಡಿಲ್ಲದೆ ಇದ್ದರೆ ಮುಂದಿನ ಹಂತಗಳ ಬಗ್ಗೆ ಉದ್ಯೋಗದಾತರಲ್ಲಿ ಕೇಳಿರಿ.

ತಾಳ್ಮೆಯಿಂದಿರಿ: ಸಂದರ್ಶನ ಪ್ರಕ್ರಿಯೆ ನಿಮಗೆ ಮುಗಿದಿರಬಹುದು. ಆದರೆ, ನೇಮಕ ತಂಡಕ್ಕೆ ಅಲ್ಲ. ನೇಮಕ ಪ್ರಕ್ರಿಯೆಯ ಬಗ್ಗೆ ನಿಮಗೆ ಪ್ರಶ್ನೆಗಳಿದ್ದರೆ ಉದ್ಯೋಗದಾತರನ್ನು  ಸಂಪರ್ಕಿಸಿ.

ಕಾಡು ಕೋಳಿ ಬಗ್ಗೆ ನಿಮಗೆ ಎಷ್ಟು ಗೊತ್ತಿದೆ