ಈ ಐಎಎಸ್ ಅಧಿಕಾರಿ ಕೇವಲ 1 ರೂಪಾಯಿ ಸಂಬಳ ಪಡೆಯುತ್ತಿದ್ದಾರೆ

By Raghavendra M Y
Apr 11, 2024

Hindustan Times
Kannada

ಯುವ ಜನತೆ ಯುಪಿಎಸ್‌ಸಿ ಸಿಎಸ್‌ಇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಪರೀಕ್ಷೆ ಪಾಸ್ ಮಾಡಿದರೆ ಸರ್ಕಾರಿ ಹುದ್ದೆ, ಹಣ ಎರಡೂ ಸಿಗುತ್ತೆ

ಸರ್ಕಾರದ ಉನ್ನತ ಹುದ್ದೆಯಲ್ಲಿರುವವರಿಗೆ ಲಕ್ಷ ಲಕ್ಷ ಸಂಬಳ ಸಿಗುತ್ತೆ. ಆದರೆ 1 ರೂಪಾಯಿ ವೇತನ ಪಡೆಯುವ ಐಎಎಸ್ ಅಧಿಕಾರಿ ನಮ್ಮ ದೇಶದಲ್ಲಿದ್ದಾರೆ

ಇದು ಕಥೆಯಲ್ಲ, ವಾಸ್ತವಾಂಶ. ಭಾರತದ ಖ್ಯಾತ ಐಎಎಸ್ ಅಧಿಕಾರಿ ಅಮಿತ್ ಕಟಾರಿಯಾ ಸರ್ಕಾರದಿಂದ ಕೇವಲ 1 ರೂ ಸಂಬಳ ಪಡೆಯುತ್ತಿದ್ದಾರೆ

ಅಮಿತ್ ಕಟಾರಿಯಾ ಅವರು 2004ರ ಬ್ಯಾಚ್‌ನ ಐಎಎಸ್‌ ಅಧಿಕಾರಿ. 2003 ರ ಯುಪಿಎಸ್‌ಸಿ ಸಿಎಸ್‌ಇ ಪರೀಕ್ಷೆಯಲ್ಲಿ 18ನೇ ರ‍್ಯಾಂಕ್ ಬಂದಿದ್ದರು

ಅಮಿತ್ ಕಟಾರಿಯಾ ಅವರು ಹರಿಯಾಣದ ಗುರುಗ್ರಾಮ್ ನಿವಾಸಿ. ಇವರಿಗೆ ಕುಟುಂಬದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಮತ್ತು ವ್ಯವಹಾರಗಳಿವೆ

ಸಮಾಜದಲ್ಲಿ ಸುಧಾರಣೆ, ಬದಲಾವಣೆ ತರಲು ಕಾರ್ಮಿಕನಾಗಿದ್ದೇನೆಯೇ ಹೊರತು ಹಣಗಳಿಸಲು ಅಲ್ಲ ಎಂದು ಈ ಹಿಂದೆ ಅಮಿತ್ ಅವರು ಹೇಳಿದ್ದಾರೆ

ದೆಹಲಿಯ ಆರ್‌ಎಫ್‌ ಪುರಂನಲ್ಲಿರುವ ಪಬ್ಲಿಕ್ ಸ್ಕೂಲ್‌ನಲ್ಲಿ ಅಮಿತ್ ಕಟಾರಿಯಾ ಅವರು ತಮ್ಮ ಆರಂಭಿಕ ಶಿಕ್ಷಣ ಪಡೆದಿದ್ದಾರೆ

ಪ್ರಾಥಮಿಕ ಶಿಕ್ಷಣದ ನಂತರ ದೆಹಲಿಯ ಐಐಟಿಯಲ್ಲಿ ಎಲೆಕ್ಟ್ರಿಕ್ ಇಂಜಿನಿಯರಿಂಗ್ ಅಧ್ಯಯನ ಮಾಡಿದ್ದಾರೆ

ಅಮಿತ್ ಕಟಾರಿಯಾ ಅವರ ಸಹೋದರ ಉದ್ಯಮಿ. ಇವರ ತಂದೆ ಸರ್ಕಾರಿ ಶಾಲೆ ಶಿಕ್ಷಕ. ಕಟಾರಿಯಾ ಅವರ ಪತ್ನಿ ಅಸ್ಮಿತಾ ಹಂಡಾ ಕಮರ್ಷಿಯಲ್ ಪೈಲಟ್

ಚೆಲುವೆಲ್ಲಾ ನಂದೆಂದ ಶ್ರುತಿ ಹಾಸನ್‌; ಸೀರೆ ಫೋಟೋಸ್‌ ನೋಡಿ