ಆತ್ಮಹತ್ಯೆಗೆ ಮುಂದಾಗಿದ್ದ ಆದಿವಾಸಿ ಹುಡುಗಿ ಪ್ರಧಾನ್ ಐಎಎಸ್ ಅಧಿಕಾರಿಯಾಗಿದ್ದೇ ರೋಚಕ

Instagram

By Raghavendra M Y
Apr 14, 2024

Hindustan Times
Kannada

ಅತಿ ಚಿಕ್ಕ ವಯಸ್ಸಿನಲ್ಲೇ ತನಗಿಂತ 11 ವರ್ಷ ದೊಡ್ಡವನೊಂದಿಗೆ ಸವಿತಾಗೆ ಮದುವೆಯಾಗುತ್ತೆ, ಇಬ್ಬರು ಮಕ್ಕಳು ಇದ್ದಾರೆ

Instagram

ಗಂಡನ ಮನೆಯಲ್ಲಿ ಸೊಸೆಯಂತೆ ಕಾಣದೆ ಸೇವಕಿಯಂತೆ ನಡೆಸಿಕೊಂಡು ಸಾಕಷ್ಟು ಕಿರುಕುಳ ನೀಡುತ್ತಾರೆ

Instagram

ಗರ್ಭಿಣಿಯಾಗಿದ್ದಾಗ ಹೊಟ್ಟೆ ತುಂಬಾ ಊಟ ಕೊಡುವುದಿಲ್ಲ, ಮನೆಯವರು ತಿಂದು ಉಳಿದರೆ ಮಾತ್ರ ಊಟ ಮಾಡಬೇಕಿತ್ತು

Instagram

ಮಧ್ಯಪ್ರದೇಶದ ಮಂಡಿ ಗ್ರಾಮದ ಆದಿವಾಸಿ ಕುಟುಂಬದ ಸವಿತಾ ಪ್ರಧಾನ್ ತನ್ನ ಮಕ್ಕಳಿಗಾಗಿ ಕಷ್ಟಗಳನ್ನು ಸಹಿಸಿಕೊಳ್ಳುತ್ತಾರೆ

Instagram

ಗಂಡನ ಮನೆಯವರ ಕಿರುಕುಳ ಸಹಿಸಲಾಗದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮುಂದಾಗುತ್ತಾರೆ, ಇದನ್ನ ನೋಡಿದ ಅತ್ತೆ ತಡೆಯುವ ಪ್ರಯತ್ನ ಮಾಡಲ್ಲ

Instagram

ಮಾನವೀಯತೆಯೇ ಇಲ್ಲದ ವ್ಯಕ್ತಿಗಳಿಂದ ನಾನು ಯಾಕೆ ಪ್ರಾಣ ಕಳೆದುಕೊಳ್ಳಬೇಕೆಂದು ನಿರ್ಧರಿಸಿ ನೇಣಿಗೆ ಕಟ್ಟಿದ ಸೀರೆ ಕಿತ್ತೆಸೆದು ಮನೆಯಿಂದ ಹೊರ ಬರುತ್ತಾರೆ

Instagram

ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಮಕ್ಕಳಿಗೆ ಟ್ಯೂಷನ್, ಅಡುಗೆ ಕೆಲಸ ಸೇರಿ ಕೈಗೆ ಸಿಕ್ಕ ಕೆಲಸ ಮಾಡಿ ಮಕ್ಕಳನ್ನು ಸಾಕುತ್ತಾರೆ

Instagram

ಸ್ವತಂತ್ರ ಬದುಕು ಆರಂಭಿಸಿದ ಬಳಿಕ ಓದು ಮುಂದುವರಿಸುವ ನಿರ್ಧಾರ ಮಾಡಿ ಬಿಎ ಮುಗಿಸುತ್ತಾರೆ, ಎಂಎ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಪೂರ್ಣಗೊಳಿಸುತ್ತಾರೆ

Instagram

ಕೆಲಸ ಹುಡುಕುತ್ತಿರುವಾಗ ಯುಪಿಎಸ್‌ಸಿ ಅಧಿಸೂಚನೆ ಕಣ್ಣಿಗೆ ಬೀಳುತ್ತೆ. ಕೆಲಸ ಎಷ್ಟು ದೊಡ್ಡದು ಅಂತ ನೋಡದೆ ಕೆಲಸದಿಂದ ಬರುವ ಸಂಬಳ ನೋಡುತ್ತಾರೆ

Instagram

ಹಗಲು ರಾತ್ರಿ ಓದಿ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿಯಲ್ಲಿ ಒಳ್ಳೆ ರ‍್ಯಾಂಕ್ ಪಡೆದು ಐಎಎಸ್ ಅಧಿಕಾರಿ ಆಗುತ್ತಾರೆ. ಆಗ ಇವರಿಗೆ 24 ವರ್ಷ

Instagram

ಐಎಎಸ್ ಆದ ಬಳಿಕವೂ ಪತಿಯ ಕಿರುಕುಳ ಮುಂದುವರಿದಾಗ ಆತನಿಂದ ವಿಚ್ಛೇದನ ಪಡೆದು ತಾನು ಇಷ್ಟ ಪಟ್ಟವರೊಂದಿಗೆ ಮದುವೆಯಾಗಿ ಸುಖ ಜೀವನ ನಡೆಸುತ್ತಿದ್ದಾರೆ

Instagram

ಸೀರೆಯಲ್ಲಿ ಸೀತಾ ರಾಮ ಪ್ರಿಯಾ ಈಗ ಬೇಲೂರು ಶಿಲಾಬಾಲಿಕೆ