ಮಿನುಗುವ ಸೀರೆ ಉಟ್ಟು ಮಿಂಚಿದ ಮಿನುಗು ತಾರೆಯರು
By Jayaraj
Nov 13, 2024
Hindustan Times
Kannada
ಇತ್ತೀಚಿನ ದಿನಗಳಲ್ಲಿ ಮಿನುಗು ಸೀರೆಯ ಟ್ರೆಂಡ್ ಶುರುವಾಗಿದೆ. ಪಾರ್ಟಿ, ಮದುವೆ ಸೇರಿದಂತೆ ಅದ್ಧೂರಿ ಕಾರ್ಯಕ್ರಮಕ್ಕೆ ನಾರಿಯರು ಮಿನುಗು ಸೀರೆ ಧರಿಸಲು ಇಷ್ಟಪಡುತ್ತಾರೆ.
ನಿಮಗೂ ಮಿನುಗು ಸೀರೆ ಇಷ್ಟವಾದರೆ, ನಾವು ನಿಮಗೆ ಕೆಲವು ಹೊಸ ಟ್ರೆಂಡ್ ಪರಿಚಯಿಸುತ್ತೇವೆ.
ಮಾಳವಿಕಾ ಮೋಹನನ್ ಗೋಲ್ಡನ್-ಸಿಲ್ವರ್ ಮಿಶ್ರಿತ ಬಣ್ಣದ ಸೀರೆ ಧರಿಸಿದ್ದಾರೆ. ಇದಕ್ಕೆ ಅವರು ಹಾಲ್ಟರ್ ನೆಕ್ ಬ್ಲೌಸ್ ಧರಿಸಿದ್ದಾರೆ.
ಕಾಜೊಲ್ ಅವರು ಸೀಕ್ವಿನ್ ಮಾದರಿಯಲ್ಲಿ ನೀಲಿ ಬಣ್ಣದ ಸೀರೆ ಧರಿಸಿದ್ದಾರೆ. ಇದು ಪಾರ್ಟಿಗಳಿಗೆ ಬೆಸ್ಟ್.
ಜಾಕ್ವೆಲಿನ್ ಫೆರ್ನಾಂಡಿಸ್ ಹಳದಿ ಬಣ್ಣದ ಮಿನುಗು ಸೀರೆಯಲ್ಲಿ ಮಿಂಚಿದ್ದಾರೆ. ಇದಕ್ಕೆ ಸಿಲ್ವರ್ ಬ್ಲೌಸ್ ಚೆನ್ನಾಗಿ ಕಾಣುತ್ತದೆ.
ಗ್ರೇ ಬಣ್ಣದ ಮಿನುಗು ಸೀರೆ ಕೂಡ ಪಾರ್ಟಿಗೆ ಪರ್ಫೆಕ್ಟ್ ಲುಕ್ ಕೊಡುತ್ತದೆ. ಇದಕ್ಕೆ ಸ್ಲೀವ್‌ಲೆಸ್ ಬ್ಲೌಸ್ ಉತ್ತಮ.
ಈರುಳ್ಳಿ ಅಥವಾ ಲ್ಯಾವೆಂಡರ್ ಬಣ್ಣ ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿದೆ. ಈ ಬಣ್ಣದ ಸೀರೆ ನೋಡಲು ಸುಂದರವಾಗಿ ಕಾಣುತ್ತದೆ. ಜಾನ್ವಿ ಅವರ ಸ್ಟೈಲ್ ನೀವು ಅನುಸರಿಸಬಹುದು.
ಗುಲಾಬಿ ಬಣ್ಣದ ಮಿನುಗು ಸೀರೆಯಲ್ಲಿ ಕರೀನಾ ಮಿಂಚು ಹರಿಸಿದ್ದಾರೆ. ಇದಕ್ಕೆ ಗುಲಾಬಿ ಬಣ್ಣದ ಸರಳ ಬ್ಲೌಸ್ ಧರಿಸಿದ್ದಾರೆ.
ನೀವು ತಿಳಿ ಹಸಿರು ಬಣ್ಣದ ಮಿನುಗು ಸೀರೆಯೂ ಆಯ್ಕೆ ಮಾಡಬಹುದು. ಕರಿಷ್ಮಾ ತಿಳಿ ಹಸಿರು ಬಣ್ಣದ ಲೈನಿಂಗ್ ವಿನ್ಯಾಸದ ಸೀರೆ ಧರಿಸಿದ್ದಾರೆ.
ಯುವರಾಜ್ ಸಿಂಗ್ ಹುಟ್ಟುಹಬ್ಬ; ಕ್ರಿಕೆಟ್ ದಾಖಲೆ-ನಿವ್ವಳ ಮೌಲ್ಯ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ