ಮೆಹಂದಿ ಫಂಕ್ಷನ್‌ಗೆ ಯಾವ ರೀತಿ ಸೀರೆ ಉಡೋದು ಅನ್ನೋರಿಗೆ ಇಲ್ಲಿದೆ ಐಡಿಯಾ 

By Reshma
Apr 25, 2024

Hindustan Times
Kannada

ಸ್ನೇಹಿತರು, ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಮಿಂಚಬೇಕಾ? ಯಾವ ರೀತಿ ಸೀರೆ ಉಟ್ರೆ ಅಂದ ಹೆಚ್ಚುತ್ತೆ ಅನ್ನೋದಕ್ಕೆ ರಚಿತಾ ರಾಮ್‌ ಕೊಡ್ತಾರೆ ನೋಡಿ ಐಡಿಯಾ. 

ಮೆಹಂದಿ ಕಾರ್ಯಕ್ರಮಕ್ಕೆ ಲಂಗ ದಾವಣಿ ಹೇಳಿ ಮಾಡಿಸಿದ್ದು. ಲೇಟೆಸ್ಟ್‌ ಟ್ರೆಂಡ್‌ನ ಲಂಗ ದಾವಣಿ ನಿಮ್ಮ ಅಂದ ಹೆಚ್ಚಿಸುತ್ತೆ. 

ಭರ್ಜರಿ ಎಂಬ್ರಾಯಿಡರಿ ಡಿಸೈನ್‌ ಇರುವ ಲೆಹಂಗಾ ಕೂಡ ಮೆಹಂದಿ ಫಂಕ್ಷನ್‌ಗೆ ಒಪ್ಪುತ್ತೆ. ಇದನ್ನು ಧರಿಸಿದಾಗ ನೀವು ಸರಳ ಮೇಕಪ್‌ ಮಾಡಿಕೊಳ್ಳಬೇಕು. 

ಬಾಂದನಿ ಸೀರೆ: ರಚಿತಾ ಧರಿಸಿರುವ ಕೆಂಪು ಬಣ್ಣ ಬಾಂದನಿ ಸಿಲ್ಕ್‌ ಸೀರೆ ನಿಮಗೂ ಒಪ್ಪಬಹುದು. ನೀವು ಬೇರೆ ಕಲರ್‌ ಕೂಡ ಆಯ್ಕೆ ಮಾಡಿಕೊಳ್ಳಬಹುದು. 

ವೈಬ್ರೆಂಟ್‌ ಔಟ್‌ಫಿಟ್‌: ತೆಳ್ಳನೆಯ ಶಿಫಾನ್‌ ಸೀರೆಗೆ ಸ್ಲೀವ್‌ಲೆಸ್‌ ಕಾಂಟ್ರ್ಯಾಸ್ಟ್‌ ಬ್ಲೌಸ್‌ ಧರಿಸುವ ಮೂಲಕ ಅಂದ ಹೆಚ್ಚಿಸಿಕೊಳ್ಳಬಹುದು. 

ಜಾರ್ಜೆಟ್‌ ಸೀರೆ ಯಾವುದೇ ಗಾತ್ರ, ಬಣ್ಣದವರಿಗೂ ಒಪ್ಪುತ್ತದೆ. ಮಾತ್ರವಲ್ಲ ಇದು ಸ್ಟೈಲಿಶ್‌ ಲುಕ್‌ಗೆ ಹೇಳಿ ಮಾಡಿಸಿದ್ದು.

ಹೂವಿನ ಚಿತ್ತಾರದ ಎಂಬ್ರಾಯಿಡರಿ ವಿನ್ಯಾಸ ಇರುವ ಸೀರೆಯನ್ನು ಕೂಡ ಮೆಹಂದಿ ಕಾರ್ಯಕ್ರಮಗಳಿಗೆ ಆಯ್ಕೆ ಮಾಡಿಕೊಳ್ಳಬಹುದು. 

ರಚಿತಾ ರಾಮ್‌ ಸೀರೆಯಲ್ಲಿ ಟ್ರೆಂಡಿ ಆಗಿ ಕಾಣಿಸುತ್ತಾರೆ. ಸದಾ ಬೇರೆ ಬೇರೆ ಡಿಸೈನ್‌ನ ಸೀರೆ ಧರಿಸುವ ಮೂಲಕ ಗಮನ ಸೆಳೆಯುವ ನಟಿ ಇವರು. 

ಬಾಯ್​ಫ್ರೆಂಡ್ ಬರ್ತ್​​ಡೇಗೆ ಮುದ್ದಾಗಿ ಶುಭಕೋರಿದ ಸ್ಮೃತಿ ಮಂಧಾನ